ಮಧ್ಯಾಹ್ನದ ಊಟ ಮುಗಿದ ಮೇಲೆ ಸ್ವಲ್ಪ ಸಿಹಿ ತಿಂದ್ರೆ ಮನಸ್ಸಿಗೂ ಒಂದು ತೃಪ್ತಿ ಸಿಗುತ್ತೆ. ಅದೇ ಸಮಯದಲ್ಲಿ ಆರೋಗ್ಯಕ್ಕೂ ಒಳ್ಳೆಯದಾಗಿರಬೇಕು ಅಂದ್ರೆ, ಸಾಮಾನ್ಯ ಗುಲಾಬ್ ಜಾಮೂನ್‌ಗೆ ಸ್ವಲ್ಪ ವಿಭಿನ್ನ ಟಚ್ ಕೊಟ್ಟು ಬೀಟ್ರೂಟ್ ಸೇರಿಸಿ ಮಾಡಿದ ಈ ಗುಲಾಬ್ ಜಾಮೂನ್ ಪರ್ಫೆಕ್ಟ್. ನೋಡಲು ಸುಂದರ, ತಿನ್ನಲು ಮೆತ್ತಗೆ, ರುಚಿ ಅಂತೂ ಹೇಳೋದೇ ಬೇಡ ಅದ್ಭುತ.
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಬೀಟ್ರೂಟ್ – ½ ಕಪ್
ಖೋವಾ (ಮಾವಾ) – 1 ಕಪ್
ಮೈದಾ – 2 ಟೇಬಲ್ ಸ್ಪೂನ್
ಕಾರ್ನ್ ಫ್ಲೋರ್ – 1 ಟೇಬಲ್ ಸ್ಪೂನ್
ಬೇಕಿಂಗ್ ಸೋಡಾ – ಒಂದು ಚಿಟಿಕೆ
ಹಾಲು – ಅಗತ್ಯಕ್ಕೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – ಹುರಿಯಲು
ಸಕ್ಕರೆ ಪಾಕಕ್ಕೆ:
ಸಕ್ಕರೆ – 1½ ಕಪ್
ನೀರು – 1 ಕಪ್
ಏಲಕ್ಕಿ ಪುಡಿ – ½ ಟೀ ಸ್ಪೂನ್
ಗುಲಾಬಿ ನೀರು – 1 ಟೀ ಸ್ಪೂನ್
ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಒಂದು ಎಳೆ ಪಾಕ ಬರುವವರೆಗೂ ಕುದಿಸಿ. ನಂತರ ಏಲಕ್ಕಿ ಪುಡಿ ಮತ್ತು ಗುಲಾಬಿ ನೀರು ಸೇರಿಸಿ ಬದಿಗೆ ಇಡಿ.
ಇನ್ನೊಂದು ಬೌಲ್‌ನಲ್ಲಿ ಖೋವಾ, ಬೀಟ್ರೂಟ್ ಪೇಸ್ಟ್, ಮೈದಾ, ಕಾರ್ನ್ ಫ್ಲೋರ್ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಒಣಗಿದ್ದರೆ ಸ್ವಲ್ಪ ಹಾಲು ಸೇರಿಸಿ ಮೃದುವಾದ ಮೃದುವಾದ ಹಿಟ್ಟಿನಂತಾಗಿಸಿಕೊಳ್ಳಿ. ಈಗ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ.
ಕಡಿಮೆ ಉರಿಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ, ಉಂಡೆಗಳನ್ನು ನಿಧಾನವಾಗಿ ಹುರಿದು ಗೋಲ್ಡನ್ ಕಲರ್ ಬಂದ ಮೇಲೆ ತೆಗೆದು ಬಿಸಿ ಬಿಸಿ ಸಕ್ಕರೆ ಪಾಕಕ್ಕೆ ಹಾಕಿ. ಕನಿಷ್ಠ 1–2 ಗಂಟೆ ಪಾಕದಲ್ಲಿ ನೆನೆಯಲು ಬಿಡಿ.



