September 17, 2026
Thursday, September 17, 2026
spot_img

ಮಗನಿಗಾಗಿ ಔಷಧ ತರಲು ಹೋದ ತಂದೆ ವಾಪಾಸ್‌ ಬರಲೇ ಇಲ್ಲ : ಭೀಕರ ಬೈಕ್‌ ಅಪಘಾತಕ್ಕೆ ಎರಡು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಾವಣಗೆರೆ ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್‌ ಬಳಿ ಎರಡು ಬೈಕ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕರೆಕಟ್ಟೆ ಗ್ರಾಮದ ಯೂಸುಫ್‌ ಖಾನ್‌ ತನ್ನ ಮಗುವಿಗೆ ಅನಾರೋಗ್ಯದ ಹಿನ್ನೆಲೆ ಸಿರಪ್‌ ತರಲು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ ಎದುರುಬದಿಯಿಂದ ಬಂದಿದ್ದಾರೆ. ಎರಡೂ ಬೈಕ್‌ ವೇಗದಲ್ಲಿದ್ದ ಕಾರಣ ಭೀಕರ ಅಪಘಾತ ಸಂಭವಿಸಿದೆ.

ದಾವಣಗೆರೆಗೆ ಹೊರಟಿದ್ದ ಯೂಸುಫ್‌ ಖಾನ್‌ ಔಷಧಿ ಪಡೆದು ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಎದುರಿಗೆ ಬಂದ ಬೈಕ್‌ ಡಿಕ್ಕಿಯಾಗಿದೆ. ಮಗುವಿಗೆ ಔಷಧ ತರಲು ಹೋಗಿದ್ದ ಅಪ್ಪ ವಾಪಸ್‌ ಬರಲೇ ಇಲ್ಲ. ಮೃತರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.

ಹದಡಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !