ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಜ್ವರ ಏರುತ್ತಿರುವ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವೊಂದು ಸೃಷ್ಟಿಯಾಗಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಟೂರ್ನಿಯ ಮಹತ್ವದ ಪಂದ್ಯದಲ್ಲಿ (ಫೆಬ್ರವರಿ 15) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಬೇಕಿತ್ತು. ಆದರೆ, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಅನಿರೀಕ್ಷಿತವಾಗಿ ಈ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದೆ.
ವಿಶ್ವಕಪ್‌ನಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿರುವುದನ್ನು ವಿರೋಧಿಸಿ ಪಾಕಿಸ್ತಾನ ಈ ನಿರ್ಧಾರಕ್ಕೆ ಬಂದಿದೆ. ಬಾಂಗ್ಲಾ ಪರ ನಿಲುವು ತಳೆದಿರುವ ಪಾಕ್, ಭಾರತದ ವಿರುದ್ಧ ಕಣಕ್ಕಿಳಿಯದಿರಲು ನಿರ್ಧರಿಸಿದೆ. ಆದರೆ ಪಾಕಿಸ್ತಾನದ ಈ ಹಠಮಾರಿತನ ಭಾರತದ ಪಾಲಿಗೆ ವರದಾನವಾಗುವ ಸಾಧ್ಯತೆಯಿದೆ.
ಪಾಕಿಸ್ತಾನ ತಂಡ ಪಂದ್ಯಕ್ಕೆ ಬರದಿದ್ದರೂ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮಾತ್ರ ಅಂದು ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಹಾಜರಿರಲೇಬೇಕು.
ಇದನ್ನೂ ಓದಿ:
ಐಸಿಸಿ ನಿಯಮಗಳ ಪ್ರಕಾರ:
ಒಂದು ತಂಡ ಪಂದ್ಯಕ್ಕೆ ಬರದಿದ್ದಾಗ, ಹಾಜರಿರುವ ತಂಡಕ್ಕೆ ‘ವಾಕ್ ಓವರ್’ ನೀಡಬೇಕೆಂದರೆ ಆ ತಂಡದ ನಾಯಕ ಟಾಸ್ ಸಮಯದಲ್ಲಿ ಮೈದಾನದಲ್ಲಿರಬೇಕು.
ಭಾರತದ ನಾಯಕ ಮೈದಾನಕ್ಕೆ ಬಂದು ಎಲ್ಲಾ ನಿಯಮಗಳನ್ನು ಪಾಲಿಸಿದಾಗ ಮಾತ್ರ ರೆಫರಿ ಭಾರತಕ್ಕೆ ಜಯ ಮತ್ತು ಸಂಪೂರ್ಣ 2 ಅಂಕಗಳನ್ನು ಘೋಷಿಸುತ್ತಾರೆ.
ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಟಾಸ್ ಗೆ ಬಾರದಿದ್ದರೆ, ಪಂದ್ಯ ಆಡದೆಯೇ ಭಾರತ ವಿಜಯಶಾಲಿಯಾಗಲಿದೆ.
ಒಟ್ಟಿನಲ್ಲಿ, ರಾಜತಾಂತ್ರಿಕ ಕಾರಣಗಳಿಂದ ಪಾಕಿಸ್ತಾನ ಪಂದ್ಯದಿಂದ ದೂರ ಉಳಿದರೆ, ಟೀಮ್ ಇಂಡಿಯಾ ಸುಲಭವಾಗಿ ಅಂಕಗಳನ್ನು ತನ್ನದಾಗಿಸಿಕೊಳ್ಳಲಿದೆ. ಫೆಬ್ರವರಿ 15 ರಂದು ಕ್ರೀಡಾಂಗಣದಲ್ಲಿ ಸೂರ್ಯ ಸದ್ದು ಮಾಡುವುದು ಮಾತ್ರ ಖಚಿತ!



