February 4, 2026
Wednesday, February 4, 2026
spot_img

ಮೊಬೈಲ್ ಗೇಮಿಂಗ್ ಎಂಬ ‘ಮಾಯಾಜಾಲ’ಕ್ಕೆ ಬಲಿಯಾದ ಮೂವರು ಸಹೋದರಿಯರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಗೇಮಿಂಗ್ ವ್ಯಸನವು ಕೇವಲ ಸಮಯವನ್ನಷ್ಟೇ ಅಲ್ಲ, ಅಮೂಲ್ಯವಾದ ಜೀವಗಳನ್ನೇ ಬಲಿಪಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಒಂದು ಭೀಕರ ಘಟನೆ ಸಂಭವಿಸಿದೆ. ಕೇವಲ ಮೊಬೈಲ್ ಗೇಮ್ ಆಡದಂತೆ ಪೋಷಕರು ಬೈದರೆಂಬ ಕಾರಣಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ವಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಬುಧವಾರ ನಸುಕಿನ ಜಾವ 2 ಗಂಟೆಯ ಸುಮಾರಿಗೆ ಭಾರತ್ ಸಿಟಿಯ ಅಪಾರ್ಟ್‌ಮೆಂಟ್ ಕಟ್ಟಡದಿಂದ ಕೆಳಕ್ಕೆ ಹಾರಿ ಈ ಮೂವರೂ ಪ್ರಾಣ ಬಿಟ್ಟಿದ್ದಾರೆ.

ವರದಿಗಳ ಪ್ರಕಾರ, ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಕ್ಲಾಸ್‌ಗಳಿಗಾಗಿ ಮೊಬೈಲ್ ನೀಡಲಾಗಿತ್ತು. ಆದರೆ ಇದು ಕ್ರಮೇಣ ವ್ಯಸನವಾಗಿ ಬದಲಾಯಿತು. ಇತ್ತೀಚಿನ ದಿನಗಳಲ್ಲಿ ಇವರು ‘ಕೊರಿಯನ್ ಲವ್ ಗೇಮ್’ ಎನ್ನುವ ಟಾಸ್ಕ್ ಆಧಾರಿತ ಆನ್‌ಲೈನ್ ಗೇಮ್‌ಗೆ ದಾಸರಾಗಿದ್ದರು. ಗೇಮಿಂಗ್ ಹುಚ್ಚಿನಿಂದಾಗಿ ಇವರು ಸರಿಯಾಗಿ ಶಾಲೆಗೂ ಹೋಗುತ್ತಿರಲಿಲ್ಲ.

ಇದನ್ನೂ ಓದಿ:

ಈ ಸಹೋದರಿಯರು ಎಷ್ಟು ಅನ್ಯೋನ್ಯವಾಗಿದ್ದರೆಂದರೆ ಊಟ, ಸ್ನಾನ, ನಿದ್ದೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು. ದುರದೃಷ್ಟವಶಾತ್ ಸಾವು ಕೂಡ ಇವರನ್ನು ಒಟ್ಟಿಗೇ ಆವರಿಸಿದೆ. ಪೋಷಕರು ಗೇಮ್ ಆಡದಂತೆ ಮಿತ ಹೇರಲು ಪ್ರಯತ್ನಿಸಿದಾಗ, ಅದರಿಂದ ಮನನೊಂದು ಈ ತೀವ್ರ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !