February 4, 2026
Wednesday, February 4, 2026
spot_img

ಟಿ20 ವಿಶ್ವಕಪ್ ಮಿಸ್, ಈಗ IPL ಕೂಡ ಡೌಟ್? ಹೈದರಾಬಾದ್‌ಗೆ ಶುರುವಾಯ್ತು ನಡುಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಸಂಭ್ರಮದ ಬೆನ್ನಲ್ಲೇ ಐಪಿಎಲ್ ಹಬ್ಬ ಶುರುವಾಗಲು ಸಜ್ಜಾಗಿದೆ. ಮಾರ್ಚ್ 26 ರಿಂದ ಟೂರ್ನಿ ಆರಂಭವಾಗಲಿದ್ದರೂ, ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕಣಕ್ಕಿಳಿಯುವುದು ಈಗ ಅನುಮಾನದ ಸುಳಿಯಲ್ಲಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಮಿನ್ಸ್ ಈಗಾಗಲೇ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಬೆನ್ನುಮೂಳೆಯ ಚೇತರಿಕೆಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾದರೆ ಮಾತ್ರ ಐಪಿಎಲ್ ಆಡುವುದಾಗಿ ಸ್ಪಷ್ಟಪಡಿಸಿದ್ದಾರೆ.

“ಸದ್ಯಕ್ಕೆ ನನ್ನ ಭಾಗವಹಿಸುವಿಕೆಯ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ಮತ್ತೊಂದು ಸುತ್ತಿನ ಸ್ಕ್ಯಾನಿಂಗ್‌ಗೆ ಒಳಗಾಗಬೇಕಿದೆ. ಚೇತರಿಕೆಯ ವೇಗವನ್ನು ಆಧರಿಸಿ ಐಪಿಎಲ್ ಆಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದು ಕಮಿನ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ:

ಮಾರ್ಚ್ ಅಂತ್ಯದ ವೇಳೆಗೆ ಕಮಿನ್ಸ್ ಫಿಟ್ ಆಗುವ ವಿಶ್ವಾಸದಲ್ಲಿದ್ದರೂ, ಕ್ರಿಕೆಟ್ ಆಸ್ಟ್ರೇಲಿಯಾ ಮಾತ್ರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಅವರು ಶೇ.100 ರಷ್ಟು ಫಿಟ್ ಆಗಿದ್ದಾರೆ ಎಂದು ವೈದ್ಯಕೀಯ ವರದಿ ಬಂದರಷ್ಟೇ ಐಪಿಎಲ್ ಆಡಲು ಅನುಮತಿ ಸಿಗಲಿದೆ. ಹೀಗಾಗಿ ಹೈದರಾಬಾದ್ ಅಭಿಮಾನಿಗಳು ಕಮಿನ್ಸ್ ಭವಿಷ್ಯ ತಿಳಿಯಲು ಮುಂದಿನ ತಿಂಗಳವರೆಗೆ ಕಾಯಲೇಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !