ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್, ಮೆಟ್ರೋ ಇತ್ಯಾದಿಯಲ್ಲಿ ಇರುವಂತೆ ಇನ್ನು ಹೆದ್ದಾರಿ ಟೋಲ್‌ಗಳಿಗೂ ಪಾಸ್ ವ್ಯವಸ್ಥೆ ಬರಲಿದೆ!
ಫಾಸ್-ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದು, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಪಾಸ್ ಸ್ಕೀಮ್ ಅನ್ನು ಘೋಷಿಸಿದ್ದಾರೆ. ‘ಮೂರು ಸಾವಿರ ರೂ ಬೆಲೆಯ ಫಾಸ್-ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದೇವೆ’ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕಮರ್ಷಿಯಲ್ ವಾಹನಗಳಿಗೆ ಈ ಪಾಸ್ ಲಭ್ಯ ಇರೋದಿಲ್ಲ. ಕಮರ್ಷಿಯಲ್ ಅಲ್ಲದ ಕಾರ್, ಜೀಪ್, ವ್ಯಾನ್ ಇತ್ಯಾದಿ ಖಾಸಗಿ ವಾಹನಗಳಿಗೆ ಮಾತ್ರ ಇದು ಸಿಗಲಿದೆ. 2025ರ ಆಗಸ್ಟ್ 15ರಿಂದ ಈ ಫಾಸ್-ಟ್ಯಾಗ್ ಪಾಸ್ ವಿತರಣೆ ನಡೆಯಲಿದೆ. ಒಂದು ಪಾಸ್ ಬೆಲೆ ೩ ಸಾವಿರ ರೂಪಾಯಿ ಇರಲಿದೆ. ಪಾಸ್ ಆಯಕ್ಟಿವೇಟ್ ಆಗಿ ಒಂದು ವರ್ಷದವರೆಗೆ ಇರಲಿದ್ದು 200 ಟ್ರಿಪ್ ಮಿತಿ ಇರಲಿದೆ.