ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ನೀವೆಲ್ಲ ಸಣ್ಣವರಿದ್ದಾಗ ಪುಣ್ಯಕೋಟಿ ಹಸು, ವ್ಯಾಘ್ರ ಹುಲಿಯ ಪದ್ಯವನ್ನು ಓದಿ ಬೇಸರಿಸಿಕೊಂಡಿದ್ವಿ. ಈಗಿನ ಮಕ್ಕಳ ಪಠ್ಯದಲ್ಲಿ ಈ ಪದ್ಯ ಇಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಟೂನ್ ವಿಡಿಯೋ ಲಭ್ಯವಿದೆ.
ಇದೇ ವಿಡಿಯೋವನ್ನು ಪೋಷಕರೊಬ್ಬರು ಮಗುವಿಗೆ ತೋರಿಸಿದ್ದು, ಕ್ಲೈಮ್ಯಾಕ್ಸ್ ನಂತರ ಬಾಲಕನೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಕೋಸ್ಟಲ್ ಬೀಟ್ಸ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿದೆ. ಮನೆಯವರೆಲ್ಲರೂ ಕುಳಿತು ಪುಣ್ಯಕೋಟಿ ಕಥೆಯನ್ನು ನೋಡುತ್ತಾರೆ. ಕ್ಲೈಮಾಕ್ಸ್ ನಂತರ ಬಾಲಕ ಬಿಕ್ಕಿಬಿಕ್ಕಿ ಅತ್ತಿದ್ದಾನೆ.
ಪುಣ್ಯಕೋಟಿ ಹಸುವಿನ ತ್ಯಾಗ, ತಾಯಿ ಮಗುವಿನ ಸಂಬಂಧದ ಮುಂದೆ ಜಗತ್ತು ತಲೆಬಾಗಲೇಬೇಕಿದೆ. ಮಗುವಿನ ಮುಗ್ಧತೆಗೆ ನೆಟ್ಟಿಗರು ಪಾಪಚ್ಚಿ ಎಂದಿದ್ದಾರೆ.
https://www.facebook.com/reel/1756929591655091
ಪುಣ್ಯಕೋಟಿ ಕಥೆ ಏನು?
ಹಸುವೊಂದು ಬೆಟ್ಟದ ಬಳಿ ಮೇವಿಗಾಗಿ ಹೋಗುತ್ತಿರುತ್ತದೆ. ಈ ವೇಳೆ ಇದಕ್ಕೆ ವ್ಯಾಘ್ರ ಹುಲಿ ಸಿಗುತ್ತಿದೆ. ನನಗೆ ಹಸಿವಾಗಿದೆ ನಿನ್ನನ್ನು ತಿಂದುಬಿಡುತ್ತೇನೆ ಎಂದು ಹುಲಿ ಕಠೋರವಾಗಿ ಹೇಳುತ್ತದೆ. ಅದಕ್ಕೆ ಹಸು ನನ್ನನ್ನು ತಿನ್ನಬಹುದು ಆದರೆ ಅದಕ್ಕೂ ಮುನ್ನ ನಾನು ನನ್ನ ಮಗುವಿಗೆ ಊಟ ನೀಡಿ ಬರಲು ಅವಕಾಶ ಕೊಡಿ ಎಂದು ಮನವಿ ಮಾಡುತ್ತದೆ. ಹುಲಿ ಅವಕಾಶ ಕೊಡುತ್ತದೆ, ಆದರೆ ಹಸು ವಾಪಾಸ್ ಬರುವುದಿಲ್ಲ ಎನ್ನುವುದು ಹುಲಿಯ ಲೆಕ್ಕಾಚಾರವಾಗಿರುತ್ತದೆ. ಮನೆಗೆ ಬಂದ ಹಸು ತನ್ನ ಕಂದನಿಗೆ ಹಾಲುಣಿಸಿ ಕಡೆಯ ಬಾರಿ ಅದನ್ನು ಮುದ್ದಾಡಿ ಮನೆಯಿಂದ ತನ್ನ ಕರ್ತವ್ಯ ನಿಭಾಯಿಸಲು ಹೊರಡುತ್ತದೆ. ಹಸುವಿನ ಪ್ರಾಮಾಣಿಕತೆಗೆ ಹುಲಿ ಕರಗುತ್ತದೆ. ತಾನೇ ಬೆಟ್ಟದಿಂದ ಜಿಗಿದು ಹಾರಿ ಪ್ರಾಣಬಿಡುತ್ತದೆ.



