February 4, 2026
Wednesday, February 4, 2026
spot_img

ಹುಡುಗರು ಒಪ್ತಿಲ್ಲ, ತಾಯಿ ಅನಾರೋಗ್ಯ: ಮನನೊಂದು ನದಿಗೆ ಹಾರಿ ಯುವತಿ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್ ನಲ್ಲಿ ಯುವತಿಯೊಬ್ಬಳು ಹುಡುಗರು ಒಪ್ತಿಲ್ಲ.. ಮದುವೆ ಆಗ್ತಿಲ್ಲ ಎಂದು ಖಿನ್ನತೆಗೊಳಗಾಗಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹೈದರಾಬಾದ್ ನ ಹುಸೇನ್ ಸಾಗರ್ ಕೆರೆಗೆ ಹಾರಿ ವಿಜಯಲಕ್ಷ್ಮಿ (26) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೈದರಾಬಾದ್ ನ ಕೂಕಟ್ಪಲ್ಲಿಯ ಮೈತ್ರಿ ನಗರದಲ್ಲಿ ನಿಜಾಮಾಬಾದ್ ಬೈನ್ಸಾ ಮೂಲದ ವಿಜಯಲಕ್ಷ್ಮಿ ಮತ್ತು ಅವರ ತಾಯಿ ಸರಸ್ವತಿ ಅವರು ವಾಸಿಸುತ್ತಿದ್ದರು. ವಿಜಯಲಕ್ಷ್ಮಿ ಐಟಿ ಸಂಸ್ಥೆಯಲ್ಲಿ ಸಾಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಚಿಕ್ಕವಳಿದ್ದಾಗ ತಂದೆ ತೀರಿಕೊಂಡಿದ್ದರು. ಆದರೆ ಮದುವೆ ವಿಳಂಬ ಮತ್ತು ತಾಯಿ ಅನಾರೋಗ್ಯದಿಂದಾಗಿ ಬೇಸತ್ತು ಖಿನ್ನತೆಗೆ ಜಾರಿದ್ದ ವಿಜಯಲಕ್ಷ್ಮಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಜನವರಿ 31ರ ಬೆಳಗ್ಗೆ ರ್ಯಾಪಿಡೊ ಬೈಕ್ ಕಾಯ್ದಿರಿಸಿ ತನ್ನ ತಾಯಿಗೆ ಎರಡು ದಿನಗಳಲ್ಲಿ ಹಿಂತಿರುಗುತ್ತೇನೆ ಎಂದು ಹೇಳಿ ಹೊರಟ ವಿಜಯಲಕ್ಷ್ಮಿ ವಾಪಸ್ ಬರದಿದ್ದಾಗ ತಾಯಿ ಸರಸ್ವತಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು.

ಈ ವೇಳೆ ಶೋಧ ನಡೆಸಿದ್ದ ಪೊಲೀಸರಿಗೆ ಹುಸೇನ್ ಸಾಗರ್ ಕೆರೆಯಲ್ಲಿ ವಿಜಯಲಕ್ಷ್ಮಿ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಶವ ಹೊರತೆಗೆದ ಪೊಲೀಸರು ಗಾಂಧಿ ಆಸ್ಪತ್ರೆಗೆ ಸಾಗಿಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕುಕಟ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ್ದಾರೆ.

ವಿಜಯಲಕ್ಷ್ಮಿಗಾಗಿ ಕುಟುಂಬಸ್ಥರು ಹಲವು ಯುವಕರನ್ನು ಆಯ್ಕೆ ಮಾಡಿದ್ದರು. ಪ್ರತೀಬಾರಿ ಬಂದವವರೂ ವಿಜಯಲಕ್ಷ್ಮಿಯನ್ನು ಒಪ್ಪುತ್ತಿದ್ದರಾದರೂ ಅವರು ಹಾಕುತ್ತಿದ್ದ ಷರತ್ತು ಒಪ್ಪುತ್ತಿರಲಿಲ್ಲ. ಹೀಗಾಗಿ ಪ್ರತೀ ಸಂಬಂಧ ಮದುವೆಯವರೆಗೂ ಹೋಗುತ್ತಿರಲಿಲ್ಲ.

ವಿಜಯಲಕ್ಷ್ಮಿಮದುವೆ ಬಳಿಕ ತನ್ನೊಟ್ಟಿಗೆ ತಾಯಿ ಕರೆದೊಯ್ಯುವುದಾಗಿ ಹೇಳುತ್ತಿದ್ದರು. ಇದನ್ನು ಆಕೆಯನ್ನು ನೋಡಲು ಬರುತ್ತಿದ್ದ ಯಾವುದೇ ಯುವಕ ಅಥವಾ ಆತನ ಪೋಷಕರು ಒಪ್ಪುತ್ತಿರಲಿಲ್ಲ. ಹೀಗಾಗಿ ಸಂಬಂಧ ಅಲ್ಲಿಗೇ ಮುರಿದು ಬೀಳುತ್ತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !