ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಈ ದಿನದ ಮಟ್ಟಿಗೆ ಬಿಜೆಪಿ ಸದಸ್ಯ ಸಿ.ಟಿ.ರವಿಯವರನ್ನು ಅಮಾನತು ಮಾಡಿದ್ದಾರೆ.
ಸಿಟಿ ರವಿ ಅವರನ್ನು ರಾತ್ರಿ ಎಂಟು ಗಂಟೆಯೊಳಗೆ ಸದನಕ್ಕೆ ಕರೆತರುವಂತೆ ವಿಪಕ್ಷ ನಾಯಕರು, ಪರಿಷತ್ ನ ವಿಪಕ್ಷ ಮುಖ್ಯ ಸಚೇತಕರಿಗೆ ಹೇಳಿದ್ದರೂ ಕೂಡ ಸಿಟಿ ರವಿ ಸಭಾಪತಿ ಆದೇಶಕ್ಕೆ ಗೌರವ ನೀಡದ ಕಾರಣ ಅಮಾನತುಗೊಳಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದ್ದಾರೆ.



