April 23, 2026
Thursday, April 23, 2026
spot_img

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಅಂತ್ಯ: ಮೊದಲ ಬಾರಿಗೆ ದಾಖಲೆಯ 91% ವೋಟಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಅಂಗವಾಗಿ ಇಂದು ಮೊದಲ ಹಂತದ ಮತದಾನ ಅಂತ್ಯವಾಗಿದೆ. ಈ ಬಾರಿ ಮೊದಲ ಬಾರಿಗೆ ದಾಖಲೆಯ ಶೇ. 91ಕ್ಕಿಂತ ಹೆಚ್ಚು ಮತದಾನವಾಗಿದೆ.

ಬಂಗಾಳದ 152 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ನಡೆಯಿತು. ಜನರು ಬಹಳ ಉತ್ಸಾಹದಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.

ಚುನಾವಣಾ ಆಯೋಗದ ಅಂದಾಜಿನ ಪ್ರಕಾರ, ಮೊದಲ ಹಂತದಲ್ಲಿ 3.60 ಕೋಟಿ ಮತದಾರರಲ್ಲಿ ಶೇ. 91.46ರಷ್ಟು ಜನರು ಮತ ಚಲಾಯಿಸಿದ್ದಾರೆ. ನಿಗದಿತ ಸಮಯದ ಬಳಿಕವೂ ಜನರು ಮತಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಎಲ್ಲರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಈ ಬಾರಿ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !