February 5, 2026
Thursday, February 5, 2026
spot_img

ಬೆಂಗಳೂರು ಜನರಿಗೆ ಮತ್ತೊಂದು ಹೊರೆ: ಮೆಟ್ರೋ ಆಯ್ತು, ಈಗ ಕಾವೇರಿ ನೀರಿನ ದರವೂ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರುದಲ್ಲಿ ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ಹೆಚ್ಚಳದ ಸುದ್ದಿಯ ಬೆನ್ನಲ್ಲೇ, ಈಗ ಕುಡಿಯುವ ನೀರಿನ ದರವೂ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ನಗರದ ನಿವಾಸಿಗಳಿಗೆ ಇದು ಮತ್ತೊಂದು ಆರ್ಥಿಕ ಒತ್ತಡವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾವೇರಿ ನೀರಿನ ಶುಲ್ಕವನ್ನು ಸುಮಾರು 3 ಶೇಕಡಾ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆಡಳಿತ ಸುಧಾರಣಾ ಸಮಿತಿಯ ಶಿಫಾರಸಿನ ಪ್ರಕಾರ ಪ್ರತಿ ವರ್ಷ ನೀರಿನ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದರ ಅನುಸಾರವಾಗಿ ಈ ಬಾರಿ ಕೂಡ ದರ ಪರಿಷ್ಕರಣೆ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

ಇದನ್ನೂ ಓದಿ:

ಎಲ್ಲವೂ ಯೋಜನೆಯಂತೆ ನಡೆದರೆ, ಏಪ್ರಿಲ್ 1ರಿಂದ ಹೊಸ ದರ ಜಾರಿಯಾಗುವ ಸಾಧ್ಯತೆ ಇದೆ. ಕಳೆದ ವರ್ಷವೂ ಏಪ್ರಿಲ್ ತಿಂಗಳಲ್ಲೇ ಗೃಹ ಬಳಕೆದಾರರಿಗೆ ನೀರಿನ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !