May 10, 2026
Sunday, May 10, 2026
spot_img

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿಗೆ ನಡೆದಿತ್ತೇ ಪ್ಲಾನ್? ಸ್ಪೀಕರ್‌ ಬಿಚ್ಚಿಟ್ಟ ಶಾಕಿಂಗ್ ವಿಚಾರ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಪತಿ ಭಾಷಣದ ಮೇಲೆ ಮಂಡಿಸಲಾಗಿದ್ದ ವಂದನಾ ನಿರ್ಣಯವನ್ನು ಲೋಕಸಭೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಇಲ್ಲದೆಯೇ ಅಂಗೀಕರಿಸಿತು. ಇದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತೀವ್ರ ಗದ್ದಲ ಕೂಡ ಉಂಟಾಯಿತು.

ಇದೀಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪ್ರಧಾನಿ ಮೋದಿ ಭಾಷಣ ರದ್ದುಗೊಳಿಸಿದ್ದಕ್ಕೆ ಕಾರಣ ತಿಳಿಸಿದ್ದು, ಅದೇನೆಂದರೆ ಪ್ರಧಾನಿ ಮೋದಿ ಅವರ ಮೇಲೆ ದೈಹಿಕ ದಾಳಿ ನಡೆಸಲು ಕಾಂಗ್ರೆಸ್ ಸಂಸದರು ಯೋಜನೆ ರೂಪಿಸಿದ್ದಾರೆ ಎಂಬ ಶಾಕಿಂಗ್ ವಿಚಾರ ಹೇಳಿದ್ದಾರೆ.

ವಿರೋಧ ಪಕ್ಷದ ಸಂಸದರು ಅನಿರೀಕ್ಷಿತವಾದದ್ದನ್ನು ಮಾಡಬಹುದು ಎಂಬ ಮಾಹಿತಿ ಇತ್ತು. ಆದ್ರೆ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಅಂತಹ ಅಹಿತಕರ ಘಟನೆಯನ್ನ ತಡೆಯಲು ಪ್ರಧಾನಿ ಮೋದಿ ಭಾಷಣ ರದ್ದುಗೊಳಿಸಲಾಯಿತು. ಅದಕ್ಕಾಗಿಯೇ ನಾನು ಪ್ರಧಾನಿಯನ್ನು ಸಂಸತ್ತಿಗೆ ಬರದಂತೆ ಒತ್ತಾಯಿಸಿದೆ ಎಂದು ಬಿರ್ಲಾ ಹೇಳಿದ್ದಾರೆ.

ವಿರೋಧ ಪಕ್ಷದ ಸದಸ್ಯರು ಪ್ರಧಾನಿ ಮೋದಿ ಭಾಷಣ ರದ್ದುಗೊಂಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದು, ಸದನದ ಬಾವಿಗಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !