ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಣ ದುರ್ಬಳಕೆ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹಗರಣ ಬೆಳಕಿಗೆ ಬರುವ ಮುನ್ನ ಪ್ರತಿದಿನ ಲಕ್ಷಾಂತರ ರೂಪಾಯಿ ದೇಣಿಗೆ ಹಣ ಅಕ್ರಮವಾಗಿ ದುರ್ಬಳಕೆಯಾಗಿರಬಹುದು ಎಂಬ ಶಂಕೆ ತನಿಖೆಯಲ್ಲಿ ವ್ಯಕ್ತವಾಗಿದೆ.
ಎಸ್‌ಐಟಿ ತನಿಖೆಯಲ್ಲಿ ಏನು ಗೊತ್ತಾಯಿತು?
ಬ್ಯಾಂಕ್ ದಾಖಲೆಗಳ ಪರಿಶೀಲನೆಯಲ್ಲಿ, ಹಿಂದೆ ಟ್ರಸ್ಟ್ ಖಾತೆಗೆ ದಿನಕ್ಕೆ ₹16-18 ಲಕ್ಷ ಜಮೆಯಾಗುತ್ತಿತ್ತು. ಹಗರಣ ಬಹಿರಂಗವಾದ ಬಳಿಕ ಇದೇ ಮೊತ್ತ ₹24-26 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಪ್ರತಿದಿನ ಸುಮಾರು ₹6-8 ಲಕ್ಷದಷ್ಟು ಹಣ ದುರ್ಬಳಕೆಯಾಗಿರಬಹುದೆಂಬ ಅನುಮಾನ ಮೂಡಿದೆ.
ಇದನ್ನೂ ಓದಿ:
ಹಣ ಎಣಿಕೆಗೆ ಹೊಸ ನಿಯಮಗಳು
ಪ್ರಕರಣದ ಬಳಿಕ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆ ತರಲಾಗಿದೆ. ಸಿಬ್ಬಂದಿಗೆ ಜೇಬುಗಳಿಲ್ಲದ ಸಮವಸ್ತ್ರ ಕಡ್ಡಾಯಗೊಳಿಸಲಾಗಿದ್ದು, ಎರಡು ಹಂತದ ತಪಾಸಣೆ, ನೆಲದ ಮೇಲೆ ಕುಳಿತು ಹಣ ಎಣಿಕೆ ಹಾಗೂ ಚಪ್ಪಲಿ-ಶೂ ಧರಿಸದಂತೆ ಹೊಸ ನಿಯಮ ಜಾರಿಯಾಗಿದೆ.
ಸಿಬಿಐ ತನಿಖೆಗೆ ಒತ್ತಾಯ
ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ಸಿಎಜಿ ಮೂಲಕ ಲೆಕ್ಕಪರಿಶೋಧನೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದೇ ವೇಳೆ ಇತರೆ ಪ್ರಮುಖ ದೇವಾಲಯಗಳಲ್ಲೂ ದೇಣಿಗೆ ನಿರ್ವಹಣೆ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.



