ಹೊಸದಿಗಂತ ಡಿಜಿಟಲ್ ಡೆಸ್ಕ್:
140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ಸರ್ಕಾರದ ಪರಮ ಗುರಿ. ಹೀಗಾಗಿ ಭಾರತವು ವಾಣಿಜ್ಯಾತ್ಮಕವಾಗಿ ಲಾಭಕಾರಿಯಾಗುವುದಾದರೆ ವೆನೆಜುವೆಲಾ ಹಾಗೂ ಇತರ ಪ್ರದೇಶಗಳಿಂದ ಕಚ್ಚಾ ತೈಲ ಪಡೆಯುವ ಎಲ್ಲಾ ಆಯ್ಕೆಗಳನ್ನೂ ಪರಿಗಣಿಸುತ್ತದೆ ಎಂತಂದು ಕೇಂದ್ರ ಸರ್ಕಾರ ಹೇಳಿದೆ.
ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ರಷ್ಯಾ, ಇರಾನ್ ಬದಲು ವೆನೆಜುವೆಲಾ ಹಾಗೂ ಅಮೆರಿಕದಿಂದ ತೈಲ ಖರೀದಿ ಖರೀದಿಸಲು ಭಾರತಕ್ಕೆ ತಿಳಿಸಿರುವುದಾಗಿ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ , ಮಾರುಕಟ್ಟೆ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಅನುಗುಣವಾಗಿ ಇಂಧನ ಮೂಲ ವಿಸ್ತರಿಸುವುದು ನಮ್ಮ ತಂತ್ರದ ಭಾಗವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
2019-20ರವರೆಗೂ ವೆನೆಜುವೆಲಾದಿಂದ ಕಚ್ಛಾ ತೈಲ ಪಡೆಯುತ್ತಿದ್ದೆವು. ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕಂಪನಿಗಳು ಆ ದೇಶದ ಇಂಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವು ಎಂದು ತಿಳಿಸಿದ್ದಾರೆ.



