September 30, 2026
Wednesday, September 30, 2026
spot_img

ಮೆಟ್ರೋ ದರ ಹೆಚ್ಚು ಮಾಡಿದ್ದು ನಾವಲ್ಲ ಎಂದ ಡಿಸಿಎಂ ಡಿ.ಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತೀ ಬಾರಿ ಮೆಟ್ರೋ ರೇಟ್‌ ಏರಿಕೆ ಬಗ್ಗೆ ಸುದ್ದಿ ಬಂದಾಗಲೂ ಅದು ರಾಜ್ಯ ಸರ್ಕಾರ ಮಾಡಿದ್ದು ಎಂದುಕೊಳ್ತಾರೆ. ಆದರೆ ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರೋದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರ್ಕಾರ ಮೆಟ್ರೋ ದರ ಹೆಚ್ಚಳ ಪ್ರಸ್ತಾವನೆಗೆ ಸಹಿ ಹಾಕಿದೆ ಎನ್ನುವ ಸುದ್ದಿಗಳು ಹರಿದಾಡ್ತಿವೆ. ಆದರೆ ನಮ್ಮ ಬಳಿಗೆ ಯಾವ ಪ್ರಸ್ತಾವನೆಯೂ ಬಂದಿಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿ, ಬಿಎಂಆರ್‌ಸಿಎಲ್‌ ಮುಖ್ಯಸ್ಥರ ಸಮಿತಿ ಇದೆ. ಅವರು ಬೆಲೆ ಏರಿಕೆ ತೀರ್ಮಾನ ಮಾಡಿದ್ದಾರೆ. ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನಾನೂ ಸುದ್ದಿ ಓದಿದಿನಿ, ನೋಡಿದಿನಿ ಅಷ್ಟೆ ಎಂದಿದ್ದಾರೆ.

Must Read