February 6, 2026
Friday, February 6, 2026
spot_img

ಅಗ್ಗದಲ್ಲಿ ಇಂಟರ್ನೆಟ್‌ ಸಿಗತ್ತೆ ಅಂತ ಟೈಮ್‌ ವೇಸ್ಟ್‌ ಮಾಡ್ಬೇಡಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ದೇಶದಲ್ಲಿ ಇಂಟರ್ನೆಟ್‌ ಅಗ್ಗವಾಗಿ ಸಿಗುತ್ತದೆ. ಪ್ರತಿಯೊಬ್ಬರ ಬಳಿಯೂ ಸಾಕಪ್ಪ ಎನ್ನುವಷ್ಟು ಇಂಟರ್ನೆಟ್‌ ಇದೆ. ಆದರೆ ವಿದ್ಯಾರ್ಥಿಗಳು ಇಂಟರ್ನೆಟ್‌ ಬಳಕೆ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಬಿಟ್ಟು ಪುಸ್ತಕದ ಕಡೆ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.ಶಿಕ್ಷಣವು ಮಕ್ಕಳಿಗೆ ಹೊರೆ ಎನಿಸಬಾರದು, ಅರೆಮನಸ್ಸಿನಿಂದ ಕಲಿತರೆ ವಿದ್ಯೆ ತಲೆಗೆ ಹತ್ತುವುದಿಲ್ಲ, ಆಸಕ್ತಿಯಿಲ್ಲದಿದ್ದರೆ ಶಿಕ್ಷಣವು ಜೀವನವನ್ನು ಯಶಸ್ವಿಗೊಳಿಸುವುದಿಲ್ಲವಾದ್ದರಿಂದ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ.

ನಮ್ಮ ಗುರಿ ತಲುಪಬಹುದಾದದ್ದಾಗಿರಬೇಕು, ಹಾಗೆಂದು ಸುಲಭವಾಗಿ ಸಾಧಿಸಲಾಗದಂತಿರಬೇಕು. ಮನಸ್ಸನ್ನು ಪಳಗಿಸಿ, ಮನಸ್ಸಿನ ಜೊತೆ ಸಂಪರ್ಕ ಹೊಂದಿ, ನೀವು ಅಧ್ಯಯನ ಮಾಡಲು ಅಗತ್ಯವಿರುವ ವಿಷಯಗಳನ್ನು ಇಟ್ಟುಕೊಳ್ಳಿ. ಆಗ ನೀವು ಯಾವಾಗಲೂ ಯಶಸ್ಸನ್ನು ಕಾಣುವಿರಿ ಎಂದು ಸಲಹೆ ನೀಡಿದ್ದಾರೆ.


Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !