April 9, 2026
Thursday, April 9, 2026
spot_img

ದೇಶೀಯ ವಸ್ತುಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ, ಇದಕ್ಕೊಂದು ಹ್ಯಾಕ್‌ ಇದೆ ಎಂದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಲ್ಲ ವಿದ್ಯಾರ್ಥಿಗಳು ದೇಶೀಯ ಪದಾರ್ಥಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ದೇಶದ ಉತ್ಪನ್ನಗಳನ್ನು ನಾವೇ ಬಳಸದಿದ್ದರೆ ಹೇಗೆ? ಈ ಬಗ್ಗೆ ನಿಮಗೊಂದು ಹ್ಯಾಕ್‌ ಹೇಳುತ್ತೇನೆ ಎಂದು ಪ್ರಧಾನಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

ಬೆಳಗ್ಗೆ ಎದ್ದಾಗಿನಿಂದ ನೀವು ಯಾವೆಲ್ಲಾ ಪದಾರ್ಥಗಳನ್ನು ಬಳಸುತ್ತೀರಿ ಎಂದು ಲಿಸ್ಟ್‌ ಮಾಡಿ. ಬ್ರಶ್‌, ಪೇಸ್ಟ್‌, ಸಾಬೂನು, ಕ್ರೀಂ, ಬಾಚಣಗೆ, ಸಾಕ್ಸ್‌ ಹೀಗೆ ಪ್ರತೀ ವಸ್ತುವನ್ನು ಲಿಸ್ಟ್‌ ಮಾಡಿ. ಮರುದಿನ ಬೆಳಗ್ಗೆ ಈ ಲಿಸ್ಟ್‌ನಲ್ಲಿ ಯಾವ ವಸ್ತುಗಳು ಯಾವ ದೇಶದ್ದು ಎಂದು ಪಟ್ಟಿ ಮಾಡಿ.

ಎಷ್ಟು ನಮ್ಮ ದೇಶದ ಪದಾರ್ಥಗಳು, ಎಷ್ಟು ಬೇರೆ ದೇಶದ್ದು ಎಂದು ಲೆಕ್ಕ ಹಾಕಿ. ಬೇರೆ ದೇಶದಿಂದ ಬರುವ ಪದಾರ್ಥಗಳು ನಮ್ಮ ದೇಶದಲ್ಲೇ ಇವೆ. ತಿಂಗಳಿಗೆ ನೀವು ಬಳಸುವ ವಸ್ತುಗಳಲ್ಲಿ ಹತ್ತು ವಸ್ತುಗಳನ್ನು ದೇಶೀಯ ವಸ್ತುಗಳನ್ನಾಗಿ ಬದಲಾಯಿಸಿ ಎಂದಿದ್ದಾರೆ. ಮುಂದಿನ ತಿಂಗಳು ಎಲ್ಲಾ ವಿದೇಶಿ ವಸ್ತುಗಳು ಹೋಗುತ್ತವೆ ಮತ್ತು ಭಾರತೀಯ ವಸ್ತುಗಳು ಮನೆಯಲ್ಲಿರುತ್ತವೆ ಎಂದು ಸ್ವದೇಶಿ ಅಭಿಯಾನದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !