February 7, 2026
Saturday, February 7, 2026
spot_img

T20 World Cup | ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್‌ ಹಬ್ಬʼ ಇಂದಿನಿಂದ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ವಿಶ್ವಕಪ್‌ ಹಬ್ಬ ಇಂದಿನಿಂದ ಆರಂಭವಾಗಲಿದೆ.

ಭಾರತದ ಐದು ಹಾಗೂ ಶ್ರೀಲಂಕದ ಮೂರು ನಗರಗಳ ಆತಿಥ್ಯದಲ್ಲಿ ಮ್ಯಾಚ್‌ ನಡೆಯಲಿದೆ. ವಿಶ್ವಕಪ್‌ಗಾಗಿ ಒಟ್ಟಾರೆ 20 ತಂಡಗಳು ಸೆಣಸಾಡಲಿವೆ.

ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ 20 ವರ್ಷದ ಗ್ರ್ಯಾಂಡ್‌ ಸೆಲೆಬ್ರೇಷನ್‌ನಲ್ಲಿ ಇದೆ. ಪ್ರತೀ ಎರಡು ವರ್ಷಕ್ಕೊಮ್ಮೆ ಈ ಟೂರ್ನಿ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ 20 ತಂಡಗಳಿವೆ, ಇವುಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಲಾಗಿದೆ.

ಭಾರತ ಟಿ20 ವಿಶ್ವಕಪ್‌ಗೆ 3ನೇ ಬಾರಿ ಆತಿಥ್ಯ ವಹಿಸುತ್ತಿದೆ. 2016ರಲ್ಲಿ ಮೊದಲ ಬಾರಿ ಭಾರತದಲ್ಲಿ ಪಂದ್ಯಗಳು ನಡೆದಿದ್ದವು. 2021ರಲ್ಲಿ ಆತಿಥ್ಯ ಹಕ್ಕು ಭಾರತಕ್ಕೆ ಸಿಕ್ಕರೂ ಪಂದ್ಯಗಳು ಕೋವಿಡ್‌ ಕಾರಣದಿಂದಾಗಿ ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆಗೊಂಡಿದ್ದವು. ಈ ಬಾರಿ ಭಾರತ-ಶ್ರೀಲಂಕಾ ಜಂಟಿಯಾಗಿ ಟೂರ್ನಿ ನಡೆಸುತ್ತಿವೆ. ಟೂರ್ನಿ ಆಯೋಜನೆಗೆ ಆರಂಭದಲ್ಲಿ ಶ್ರೀಲಂಕಾ ಮಾತ್ರ ಆಸಕ್ತಿ ತೋರಿತ್ತು.

2021ರಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿದ್ದ ಐಸಿಸಿ, ಟೂರ್ನಿ ಲಂಕಾದಲ್ಲಿ ನಡೆಯುವುದಾಗಿ ತಿಳಿಸಿತ್ತು. ಆದರೆ ಟೂರ್ನಿಯ ವಿಸ್ತರಣೆ ಹಾಗೂ ಲಂಕಾದಲ್ಲಿ ಕ್ರೀಡಾಂಗಣಗಳ ಕೊರತೆಯ ಕಾರಣದಿಂದಾಗಿ ಭಾರತದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ಆಯೋಜಿಸಲು ಐಸಿಸಿ ನಿರ್ಧರಿಸಿತು. ಶ್ರೀಲಂಕಾ ಈ ಹಿಂದೆ 2012ರಲ್ಲಿ ವಿಶ್ವಕಪ್ ಆಯೋಜಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !