October 17, 2026
Saturday, October 17, 2026
spot_img

Tips | ದೇಹದ ಉಷ್ಣಾಂಶಕ್ಕೆ ಹೇಳಿ ಗುಡ್‌ಬೈ: ನಿಮ್ಮ ಕಿಚನ್‌ನಲ್ಲೇ ಇದೆ ಕೂಲ್ ಪರಿಹಾರ!

ನಮ್ಮ ದೇಹದ ಸಾಮಾನ್ಯ ತಾಪಮಾನ ಸುಮಾರು 37°C ಇರುತ್ತದೆ. ಆದರೆ ಕೆಲವು ಆಂತರಿಕ ಅಥವಾ ಬಾಹ್ಯ ಕಾರಣಗಳಿಂದ ಇದು ಹೆಚ್ಚಾದಾಗ, ನಾವು ಸುಸ್ತು, ತಲೆನೋವು ಮತ್ತು ಚರ್ಮದ ಕಿರಿಕಿರಿ ಅನುಭವಿಸುತ್ತೇವೆ.

ದೇಹ ಹೀಟ್ ಆಗಲು ಪ್ರಮುಖ ಕಾರಣಗಳು:

ದಿನಕ್ಕೆ ಬೇಕಾದಷ್ಟು ನೀರು ಕುಡಿಯದಿರುವುದು.

ಅತಿಯಾದ ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು ಮತ್ತು ಕೆಫೀನ್ (ಕಾಫಿ/ಟೀ) ಸೇವನೆ.

ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವುದು ಅಥವಾ ಅಲೆದಾಡುವುದು.

ಕೆಲವು ಆ್ಯಂಟಿಬಯೋಟಿಕ್ಸ್ ಅಥವಾ ಸ್ಟೀರಾಯ್ಡ್‌ಗಳ ಅಡ್ಡಪರಿಣಾಮ.

ಮಾನಸಿಕ ಒತ್ತಡ ಮತ್ತು ಸರಿಯಾದ ನಿದ್ರೆಯಿಲ್ಲದಿರುವುದು.

ಇದಕ್ಕೆ ಪರಿಹಾರಗಳೇನು?

ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯುವುದನ್ನು ಮರೆಯಬೇಡಿ.

ಎಳನೀರು, ಮಜ್ಜಿಗೆ, ಸಕ್ಕರೆ ಹಾಕದ ಹಣ್ಣಿನ ರಸಗಳು ಮತ್ತು ಕಬ್ಬಿನ ಹಾಲು ದೇಹವನ್ನು ತಕ್ಷಣ ತಂಪಾಗಿಸುತ್ತವೆ.

ನೀರಿಗೆ ನೆನೆಸಿದ ಸಬ್ಜಾ ಬೀಜಗಳನ್ನು ಬೆರೆಸಿ ಕುಡಿಯುವುದು ಬಾಡಿ ಹೀಟ್‌ಗೆ ರಾಮಬಾಣ.

ಸೌತೆಕಾಯಿ, ಕಲ್ಲಂಗಡಿ, ಮೊಸರು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ರಾತ್ರಿ ವೇಳೆ ಕನಿಷ್ಠ 7-8 ಗಂಟೆಗಳ ನಿದ್ರೆ ಮಾಡುವುದರಿಂದ ಹಾರ್ಮೋನ್ ಸಮತೋಲನ ಕಾಯ್ದುಕೊಳ್ಳಬಹುದು.

Must Read