October 10, 2026
Saturday, October 10, 2026
spot_img

FASHION | ಮಹಿಳೆಯರಿಗ್ಯಾಕೆ ಶಾಪಿಂಗ್‌ ಅಂದ್ರೆ ಇಷ್ಟ? ಖರೀದಿ ಮಾಡೋದಂದ್ರೆ ಥೆರಪಿ ಇದ್ದಂತೆ!

ಮಹಿಳೆಯರು ಅಂದ್ರೆ ಸಾಕು ಹೆಚ್ಚು ಶಾಪಿಂಗ್‌ ಮಾಡ್ತಾರೆ, ಮನೆತುಂಬಾ ಬಟ್ಟೆ ಇದೆ ಎಂದು ಲೇಬಲ್‌ ಮಾಡಲಾಗುತ್ತದೆ. ಆದರೆ ಜನರ ಮಾತು ಸುಳ್ಳಲ್ಲಿ ಹೆಚ್ಚು ಹೆಣ್ಣು ಮಕ್ಕಳಿಗೆ ಶಾಪಿಂಗ್‌ ಮಾಡೋದು ಖುಷಿ ನೀಡುತ್ತದೆ. ಥರಥರದ ಬಟ್ಟೆಗಳನ್ನು ಹಾಕಿಕೊಳ್ಳೋದು, ಹಾಕದೇ ಇದ್ದರೂ ಸುಮ್ಮನೆ ಕಬೋರ್ಡ್‌ನಲ್ಲಿ ಇಟ್ಟುಕೊಳ್ತಾರೆ. ಇದಕ್ಕೆ ಕಾರಣ ಏನು?

ಮಹಿಳೆಯರು ತಮಗಾಗಿ ಎಷ್ಟು ಖರೀದಿ ಮಾಡೋಕೆ ಇಷ್ಟಪಡುತ್ತಾರೋ ಅದೇ ರೀತಿ ತಮ್ಮ ಮನೆಯವರಿಗೆ, ಮಕ್ಕಳಿಗೆ ಶಾಪಿಂಗ್‌ ಮಾಡೋದನ್ನೂ ಇಷ್ಟಪಡ್ತಾರೆ. ಒಟ್ಟಾರೆ ಶಾಪಿಂಗ್‌ ಮಾಡಬೇಕಷ್ಟೆ.

ಸ್ನೇಹಿತರು, ಸಮಾಜ ಹುಡುಗಿಯರ ಬಟ್ಟೆಯನ್ನು ಅಳೀತಾರೆ, ಎಷ್ಟು ಚಂದದ ಬಟ್ಟೆ ಎಂದು ಹೊಗಳುತ್ತಾರೆ. ಇನ್ನು ಹೆಣ್ಣುಮಕ್ಕಳಿಗೆ ಕಡಿಮೆ ಬೆಲೆ ಇರುವ ಬಟ್ಟೆಗಳು ಕಾಣಿಸಿದ್ರೆ ಹಾಕದೇ ಇದ್ರೂ ಮುಂದೊಂದು ದಿನ ಹಾಕಬಹುದು ಎಂದು ತಗೋತಾರೆ.

ಮಾರ್ಕೆಟಿಂಗ್‌ ಸ್ಟಾಟರ್ಜಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡುತ್ತದೆ. ಹೆಚ್ಚು ಶಾಪಿಂಗ್‌ ಆಪ್ಷನ್ಸ್‌ ಅವರ ಬಳಿ ಇದೆ. ಸ್ನೇಹಿತೆಯರು ಸಿಗೋದಕ್ಕೆ, ಮನೆಯವರು ಹೊರಗೆ ಹೋದರೆ ಶಾಪಿಂಗ್‌ ನೆಪದಲ್ಲಿ ಟೈಮ್‌ ಸ್ಪೆಂಡ್‌ ಮಾಡುತ್ತಾರೆ.

ಮಹಿಳೆಯರಿಗೆ ಶಾಪಿಂಗ್‌ ಎಂದರೆ ಥೆರಪಿ ಇದ್ದಂತೆ. ಮನಸ್ಸಿಗೆ ನೋವಾದರೂ, ಖುಷಿಯಾದರೂ ಶಾಪಿಂಗ್‌ ಮಾಡಲು ಬಯಸುತ್ತಾರೆ. ಎಲ್ಲರಿಗೂ ಒಂದೊಂದು ಹಾಬಿ ಇದ್ದಿದ್ದೇ ಅಲ್ವಾ?

Must Read