ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪ್ರೇಮದ ಊರಲಿ ಸಿನಿಮಾ ಇದೀಗ ವಿದೇಶಗಳ ಜನತೆಯ ಮನಸ್ಸನ್ನು ಗೆಲ್ಲಲು ಸಜ್ಜಾಗಿದೆ. ನಿಮ್ಮ ನಿಮ್ಮ ದೇಶದಲ್ಲಿರುವ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೀನಿ. ಎಲ್ಲರೂ ಚಿತ್ರಮಂದಿರಗಳಲ್ಲಿಯೇ ನಮ್ಮ ಸಿನಿಮಾ ವೀಕ್ಷಿಸಿ ಎಂದು ಪ್ರೇಮದ ಊರಲಿ ಚಿತ್ರದ ಪ್ರಮುಖ ಪಾತ್ರಧಾರಿ ರಮಿಕಾ ಶಿವು ಮನವಿ ಮಾಡಿದ್ದಾರೆ.
ಚಿತ್ರತಂಡ ತಿಳಿಸಿದಂತೆ ಅಕ್ಟೋಬರ್ 9ರಂದು ಭಾರತದ ಪ್ರಮುಖ ನಗರಗಳೂ ಸೇರಿ ವಿದೇಶಗಳಲ್ಲಿ ಈ ಸಿನಿಮಾ ತೆರೆಕಂಡಿದ್ದು, ಚಿತ್ರದ ಪ್ರಮುಖ ಕಲಾವಿದರು ಅಭಿಮಾನಿಗಳಲ್ಲಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸಿ ಬೆಂಬಲಿಸಬೇಕೆಂದು ಕೇಳಿಕೊಂಡಿದ್ದಾರೆ. ನಮ್ಮ ಸಿನಿಮಾ ನಿಮ್ಮೆಲ್ಲರಿಗೂ ತುಂಬಾ ಇಷ್ಟ ಆಗಿದೆ. ಒಪ್ಪಿದ್ದೀರಿ ನಮ್ಮನ್ನು ಬೆಳೆಸುತ್ತಿದ್ದೀರಿ. ಕೆಆರ್ಜಿ ಸ್ಟುಡಿಯೋ ಅನಿಲ್ ಥಡಾನಿ ಅವರ ಎಎ ಸಿನಿಮಾಸ್ ಮೂಲಕ ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ನಮ್ಮ ಪ್ರೇಮದ ಊರಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗಾಗಿ, ಎಲ್ಲರೂ ಹೋಗಿ ಥಿಯೇಟರ್ನಲ್ಲೇ ಈ ಸಿನಿಮಾ ವೀಕ್ಷಿಸಿ ಎಂದು ಕೇಳಿಕೊಳ್ಳುತ್ತೀನಿ. ಹಾಗೆಯೇ ಕೆಆರ್ಜಿ ಸ್ಟುಡಿಯೋಸ್ ಓವರ್ಸೀಸ್ ಅವರಿಂದ ಬೇರೆ ದೇಶಗಳಲ್ಲಿಯೂ ಕೂಡಾ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ನಿಮ್ಮ ನಿಮ್ಮ ದೇಶದಲ್ಲಿರುವ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೀನಿ. ಎಲ್ಲರೂ ಬಂದು ಥಿಯೇಟರ್ನಲ್ಲೇ ನಮ್ಮ ಸಿನಿಮಾ ನೋಡಿ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ಮುಖ್ಯಭೂಮಿಕೆಯಲ್ಲಿರುವ ಶ್ರೀರಾಮ್ ಮತ್ತು ತಪಸ್ವಿನಿ ಪೂಣಚ್ಚ ಮಾತನಾಡಿ, ಸರ್ವರಿಗೂ ಧನ್ಯವಾದ ಅರ್ಪಿಸಿದ್ದರು. ನಿಮ್ಮೆಲ್ಲರ ಪ್ರೀತಿ, ಪ್ರೇಮ, ಆಶೀರ್ವಾದದಿಂದ ಪ್ರೇಮದ ಊರಲಿ ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಪ್ರೇಮ ಗಡಿದಾಟುತ್ತಿದೆ. ಕೆಆರ್ಜಿ ಸ್ಟುಡಿಯೋಸ್ ಮುಖಾಂತರ ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ನಿಂದ ದೇಶದ ಎಲ್ಲಾ ರಾಜ್ಯಗಳ ಹಲವು ನಗರಗಳಲ್ಲಿ ಬಿಡುಗಡೆಯಾಗುತ್ತಿದೆ. ಕೆಆರ್ಜಿ ಸ್ಟುಡಿಯೋಸ್ ಓವರ್ಸೀಸ್ ಇಂದ ವಿದೇಶಗಳಲ್ಲಿಯೂ ತೆರೆಕಾಣುತ್ತಿದೆ. ನಿಮ್ಮ ನಿಮ್ಮ ದೇಶದ ಪ್ರೇಮದ ಊರುಗಳಿಂದ ನಮ್ಮ ಪ್ರೇಮದ ಊರಿಗೆ ಬನ್ನಿ ಎಂದು ಕೇಳಿಕೊಳ್ಳುತ್ತೀವಿ ಎಂದು ಹೇಳಿದ್ದಾರೆ.



