February 7, 2026
Saturday, February 7, 2026
spot_img

ಹೋಂವರ್ಕ್ ಮಾಡಿಲ್ಲವೆಂದು ನೂರವೈತು ಬಾರಿ ಮಗುವಿಗೆ ಹೊಡೆದ ಶಿಕ್ಷಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನೈಲಗಂಜ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಹೋಂವರ್ಕ್ ಪೂರ್ಣಗೊಳಿಸದ ಕಾರಣಕ್ಕೆ ಎರಡನೇ ತರಗತಿ ಮಗುವಿಗೆ ನೂರವೈತು ಬಾರಿ ಬಾಸುಂಡೆ ಬರುವವರೆಗೂ ಶಿಕ್ಷಕ ಥಳಿಸಿದ ಘಟನೆ ನಡೆದಿದೆ.

ಎಂಆರ್‌ಜಿ ಶಾಲೆಯ ಇಂಗ್ಲಿಷ್ ಶಿಕ್ಷಕ ಪ್ರಖರ್ ಸಿಂಗ್ ಎಂಬಾತ ಹೋಂವರ್ಕ್ ಪೂರ್ಣಗೊಳಿಸದ ಕಾರಣದಿಂದ ಮಗುವಿನ ಕಾಲುಗಳ ಮೇಲೆ ಪದೇ ಪದೆ ಹೊಡೆದಿದ್ದಾರೆ. ಇದರಿಂದ ಮಗುವಿನ ಕಾಲುಗಳಲ್ಲಿ ಗಾಯದ ಗುರುತುಗಳು, ಊತ ಮತ್ತು ತೀವ್ರ ನೋವು ಉಂಟಾಗಿದೆ.

ಮಗು ಶಾಲೆ ಮುಗಿಸಿ ಮನೆಗೆ ತಲುಪಿದಾಗ ದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ ಕುಟುಂಬಸ್ಥರು ಆಘಾತಗೊಂಡರು. ಮಗುವಿನ ತಂದೆ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ನಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115 (2), 351 (3) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕರ್ನೈಲಗಂಜ್ ಸರ್ಕಲ್ ಆಫೀಸರ್ ಅಭಿಷೇಕ್ ದಬಾಚಾ ತಿಳಿಸಿದ್ದಾರೆ.

ಘಟನೆ ಬಳಿಕ ಶಾಲಾ ಪ್ರಾಂಶುಪಾಲರು ತಕ್ಷಣವೇ ಇಂಗ್ಲಿಷ್ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !