ಭಾರತದ ಆತ್ಮನಿರ್ಭರದ ಶಕ್ತಿ ಜಗತ್ತಿಗೆ ಎತ್ತಿ ತೋರಿಸಿದ ಆಪರೇಷನ್ ಸಿಂದೂರ್: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ಕುರಿತು ಚರ್ಚೆಯ ವೇಳೆ ಪ್ರಧಾನಿ ಮೋದಿ ಗುಡುಗಿದ್ದಾರೆ.

ಪಾಕ್ ವಿರುದ್ದದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಜಗತ್ತಿನ 193 ದೇಶಗಳ ಪೈಕಿ 190 ದೇಶಗಳು ನಮ್ಮನ್ನು ಬೆಂಬಲಿಸಿವೆ. 3 ದೇಶಗಳು ಮಾತ್ರ ಪಾಕಿಸ್ತಾನಕ್ಕೆ ಬೆಂಬಲಿಸಿವೆ ಎಂದು ಹೇಳಿದರು. .

ಆಪರೇಷನ್ ಸಿಂದೂರದಲ್ಲಿ ನಾವು ಮೇಡ್ ಇನ್ ಇಂಡಿಯಾ ವೆಪನ್‌ಗಳನ್ನು ಬಳಸಿ ಯಶಸ್ಸು ಸಾಧಿಸಿದ್ದೇವೆ. ನಮ್ಮ ದೇಶದ ಆತ್ಮನಿರ್ಭರದ ಶಕ್ತಿ ಜಗತ್ತಿಗೆ ತಿಳಿದಿದೆ. ಇದು ಭಾರತದ ಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ಎತ್ತಿ ತೋರಿಸಿದೆ ಎಂದು ಗುಡುಗಿದರು.

ವಿಪಕ್ಷಗಳ ವಿರುದ್ಧ ಗುಡುಗಿದ ಅವರು, ಮಾದ್ಯಮಗಳಲ್ಲಿ ನೀವು ಹೆಡ್‌ಲೈನ್ ಆಗಬಹುದು. ಆದ್ರೆ, ನಿಮಗೆ ದೇಶವಾಸಿಗಳ ಹೃದಯದಲ್ಲಿ ಸ್ಥಾನ ಸಿಗುವುದಿಲ್ಲ ಎಂದುಚಾಟಿ ಬೀಸಿದರು .

ಭಾರತೀಯ ಸೇನೆ 100 ರಷ್ಟು ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಆಪರೇಷನ್ ಸಿಂದೂರದ ಸಮಯಲ್ಲಿ ವಿಪಕ್ಷಗಳು ಪಾಕ್ ಪರ ಹೇಳಿಕೆ ಕೊಡಲು ಬ್ಯುಸಿಯಾಗಿದ್ದರು ಎಂದರು.

ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ನೆಲೆಗಳು ನಾಶವಾಗಿವೆ . ಆ ಸ್ಥಳಿಗೆ ಭಾರತೀಯ ಸೇನೆ ತಲುಪುತ್ತೆ ಎಂದು ಯಾರೂ ಊಹಿಸಿಯೂ ಇರಲಿಲ್ಲ. ಬಹಾವಲ್ಪುರ, ಮುರಿಡ್ಕೆ ಕೂಡ ನೆಲಸಮವಾಗಿದೆ. ನಮ್ಮ ಸೇನೆ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿವೆ. ಪಾಕಿಸ್ತಾನದ ಪರಮಾಣು ಬೆದರಿಕೆ ಸುಳ್ಳು ಎಂದು ನಾವು ಸಾಬೀತುಪಡಿಸಿದ್ದೇವೆ. ಪರಮಾಣು ಬ್ಲ್ಯಾಕ್‌ಮೇಲಿಂಗ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಭಾರತ ಸಾಬೀತುಪಡಿಸಿದೆ ಮತ್ತು ಭಾರತವೂ ಈ ಪರಮಾಣು ಬ್ಲ್ಯಾಕ್‌ಮೇಲಿಂಗ್‌ಗೆ ತಲೆಬಾಗಲ್ಲ ಎಂದು ಪ್ರಧಾನಿ ಮೋದಿ ಪಾಕ್‌ಗೆ ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!