April 15, 2026
Wednesday, April 15, 2026
spot_img

ಕೇರಳದಲ್ಲಿ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ ಕೊಡಗಿನ‌ ಉದ್ಯಮಿ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗಿನ ಉದ್ಯಮಿಯೊಬ್ಬರು‌ ಕುಟುಂಬ ಸಮೇತ ಕೇರಳದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು,‌ ಘಟನೆಯಲ್ಲಿ ಉದ್ಯಮಿ ಸಾವಿಗೀಡಾದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿ ಸಜೀರ್ ಆತ್ಮಹತ್ಯೆಗೆ ಶರಣಾದವರು.

ಉದ್ಯಮಿ ಸಜೀರ್​​​, ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಕೇರಳದ ವಯನಾಡಿನವರೆನ್ನಲಾದ ಬಾಪು ಎಂಬಾತ ಸಜೀರ್​​ಗೆ 20 ಲಕ್ಷ ರೂ. ನೀಡಬೇಕಿತದರೆಂದು‌ ಹೇಳಲಾಗಿದೆ. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ತನ್ನ ಕುಟುಂನದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು‌ ಬೆಂಕಿ ಹಚ್ಚಿಕೊಂಡಿದ್ದು, ಈ ಸಂದರ್ಭ ಸಜೀರ್ ಸಾವನ್ನಪ್ಪಿದ್ದರೆ, ಪತ್ನಿ ಹಾಗೂ ಮಕ್ಕಳು ಪಾರಾಗಿದ್ದಾರೆ.
ಆದರೆ ಪತ್ನಿಗೆ ಗಂಭೀರ ಗಾಯವಾಗಿದ್ದು, ಕ್ಯಾಲಿಕೆಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್​ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !