July 27, 2026
Monday, July 27, 2026
spot_img

ಸುರಕ್ಷತಾ ಕ್ರಮಗಳಿಲ್ಲದೆ ಕೆಲಸ: ಎರಡನೇ ಮಹಡಿಯಿಂದ ಬಿದ್ದು ಕಾರ್ಮಿಕನ ದಾರುಣ ಸಾ*ವು

ಹೊಸದಿಗಂತ ವರದಿ ಉತ್ತರಕನ್ನಡ:

ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲೋನಿಯಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿರುವಾಗ ಕಟ್ಟಡ ಮೇಲಿಂದ ಬಿದ್ದು ಪತಿ ಸಾವನ್ನಪ್ಪಲು ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನ ನಿರ್ಲಕ್ಷ್ಯ ಕಾರಣ ಎಂದು ಮೃತನ ಪತ್ನಿ ಇಲ್ಲಿನ ಪೊಲೀಸ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದಾರೆ.

ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಮಂಜುನಾಥ ಮಾದರ (45) ಮೃತಪಟ್ಟ ಕಾರ್ಮಿಕ. ಇವರ ಪತ್ನಿ ಶಂಕ್ರವ್ವಾ ಮಾದರ ಎಂಬುವರುದೂರ ದಾಖಲಿಸಿದ ಮಹಿಳೆ.

ಗುತ್ತಿಗೆದಾರ ಇಸ್ಮಾಯಿಲ್ ಸಾಬ ಎಂಬಾತನ ಮೇಲೆ ದೂರು ದಾಖಲಾಗಿದೆ. ಈತನು ಟಿಬೆಟಿಯನ್ ಕಾಲೋನಿಯಲ್ಲಿ ಕಟ್ಟಡದ ಗುತ್ತಿಗೆ ಪಡೆದಿದ್ದನು ಈ ಕಟ್ಟಡಕ್ಕೆ ಕಾರ್ಮಿಕನಾಗಿ ಮಂಜುನಾಥ ಕೆಲಸ ಮಾಡುತ್ತಿದ್ದನು. ಜೂನ್ 26 ರಂದು ಕಟ್ಟಡ ಕೆಲಸ ಮಾಡಿಸುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಕಟ್ಟಡದ ಎರಡನೇ ಮಹಡಿಗೆ ಹತ್ತಿಸಿ ಕೆಲಸ ಮಾಡಿಸುತ್ತಿದ್ದಾಗ ಮೇಲಿನಿಂದ ಬಿದ್ದು ತೀವ್ರ ಸ್ವರೂಪದ ಗಾಯವಾಗಿತ್ತು.

ಇದನ್ನೂ ಓದಿ:

ಪಟ್ಟಣದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ತಡರಾತ್ರಿ ಸಾವನ್ನಪ್ಪಿದ್ದಾರೆ.

ನನ್ನ ಪತಿಯ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯತನವೇ ಕಾರಣವಾಗಿದ್ದು ಗುತ್ತಿಗೆದಾರ ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ಶಂಕ್ರವ್ವ ಸೋಮವಾರ ಇಲ್ಲಿನ ಪೊಲೀಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !