ಮೆಟ್ರೋದಲ್ಲಿ ಜೊತೆ ಜೊತೆಯಾಗಿ ಪ್ರಯಾಣ: ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗೆ ಇಂದು ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್​, ಹಳದಿ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿದರು.

ಈ ವೇಳೆ ಮೆಟ್ರೋದಲ್ಲಿ ಪ್ರಯಾಣಕ್ಕೂ ಮುನ್ನ UPI ಮೂಲಕ ಮೋದಿ ಟಿಕೆಟ್ ಪಡೆದು ಪ್ರಯಾಣ ಮಾಡಿದ್ರು.ಬಳಿಕ ಮೋದಿ ಜೊತೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಜೊತೆಯಾಗಿ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಈ ವೇಳೆ ಪಿಎಂ, ಸಿಎಂ, ಡಿಸಿಎಂ ಮನಸಾರೆ ನಕ್ಕಿದ್ದಾರೆ. ನಾಯಕರ ತಮಾಷೆಯ ಮಾತುಕತೆ ವಿಡಿಯೋ ಇದೀಗ ಎಲ್ಲರ ಗಮನಸೆಳೆದಿದೆ.

ಮೋದಿ, ಸಿಎಂ, ಡಿಸಿಎಂ ಹಾಗೂ ಕೆಲ ಬಿಜೆಪಿ ನಾಯಕರ ಜೊತೆ ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಈ ವೇಳೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಾಮಾನ್ಯ ಜನರ ಜೊತೆ ಕೂಡ ಮೋದಿ ಮಾತಾಡಿದ್ರು. ಬಳಿಕ ಪ್ರಯಾಣದ ವೇಳೆ ರಾಜಕೀಯ ನಾಯಕರ ಜೊತೆ ಕೂಡ ಆತ್ಮೀಯತೆಯಿಂದ ಮಾತಾಡಿದ್ದಾರೆ.

ಮೆಟ್ರೋದಲ್ಲಿ ಪ್ರಧಾನಿ ಮೋದಿ ಪಕ್ಕದಲ್ಲಿ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇದ್ದರು. ಪ್ರಯಾಣದ ವೇಳೆ ಮೂವರು ಮಾತಾಡ್ತಾ ಮನಸಾರೆ ನಕ್ಕಿದ್ದಾರೆ. ವಿರೋಧ ಪಕ್ಷದವರು ಅನ್ನೋದನ್ನ ಮರೆತು ಮಾತಾಡಿದ್ದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!