ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಹಾಗೂ ನೇಪಾಳ ನಡುವಿನ ಮ್ಯಾಚ್ ನಲಿ ಕೊನೆಯ ಕ್ಷಣದಲ್ಲಿ ನೇಪಾಳ ಸೋಲು ಒಪ್ಪಿಗೊಂಡಿತು.
ನೇಪಾಳ ಕೊನೆಯ ಓವರ್ನಲ್ಲಿ 10 ರನ್ ಹೊಡೆಯಲು ಸಾಧ್ಯವಾಗದೆ 4 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಕೊನೆಯ ಎಸೆತವನ್ನು ಹಾಕುವವರೆಗೂ ಇಂಗ್ಲೆಂಡ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಸೋಲಿನ ಭಯ ಹುಟ್ಟಿಸುವಲ್ಲಿ ನೇಪಾಳ ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಂಗ್ಲೆಂಡ್ 184 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೇಪಾಳ 180 ರನ್ ಕಲೆಹಾಕಲಷ್ಟೇ ಶಕ್ತವಾಗಿ 4 ರನ್‌ಗಳಿಂದ ವೀರೋಚಿತ ಸೋಲಿಗೆ ಕೊರಳೊಡ್ಡಿತು.
ಇಂಗ್ಲೆಂಡ್ ನೀಡಿದ್ದ ಟಾರ್ಗೆಟ್ ಬೆನ್ನತ್ತಿದ ನೇಪಾಳ ಉತ್ತಮ ಆರಂಭ ಪಡೆಯಿತು. ಆರಂಭಿಕ ಕುಶಾಲ್ ಭುರ್ತೆಲ್ 29 ಮತ್ತು ದೀಪೇಂದ್ರ ಸಿಂಗ್ ಐರಿ 44 ರನ್ ಗಳಿಸಿ ಇಂಗ್ಲೆಂಡ್ ಮೇಲೆ ಒತ್ತಡ ಹೇರಿದರು. ನಾಯಕ ರೋಹಿತ್ ಪೌಡೆಲ್ 39 ರನ್ ಗಳಿಸಿದರು. ಕೊನೆಯಲ್ಲಿ ಲೋಕೇಶ್ ಬಾಮ್ 20 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು.
ಅಂತಿಮವಾಗಿ ನೇಪಾಳ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಮಾತ್ರ ಗಳಿಸಿ, ಪಂದ್ಯವನ್ನು 4 ರನ್‌ಗಳಿಂದ ಸೋತಿತು.



