February 9, 2026
Monday, February 9, 2026
spot_img

ದಿನಭವಿಷ್ಯ: ನಿಮ್ಮ ಕಠಿಣ ಪರಿಶ್ರಮಕ್ಕೆ ಇಂದು ಮಾನ್ಯತೆ ಸಿಗಲಿದೆ.. ತಾಳ್ಮೆಯಿಂದ ನಿಭಾಯಿಸಿ!

ಮೇಷ
ಪರಿಸ್ಥಿತಿಗೆ ತಕ್ಕಂತೆ ವರ್ತಿಸಿರಿ. ಕೆಲವರ ಬಗ್ಗೆ ಪೂರ್ವಗ್ರಹ ಬಿಡಿ. ವೃತ್ತಿ ಕ್ಷೇತ್ರದಲ್ಲಿ ಒತ್ತಡ ಹೆಚ್ಚಲಿದೆ.          
ವೃಷಭ
ಉದ್ವಿಗ್ನತೆ ಕಳೆದು ಉತ್ಸಾಹದ ಪರಿಸರ ನಿರ್ಮಾಣ.  ಆತುರದ ತೀರ್ಮಾನ ಪ್ರತಿಕೂಲ ಪರಿಣಾಮ ತರದಂತೆ ಎಚ್ಚರ ವಹಿಸಿರಿ.

ಮಿಥುನ
ಕೆಲವು ದಿನಗಳ ಒತ್ತಡ ಕಳೆದು ನಿರಾಳತೆ. ಪ್ರೀತಿಯ ಅಹವಾಲಿಗೆ ಗುಣಾತ್ಮಕ ಸ್ಪಂದನೆ ಲಭ್ಯ.   ಮನೆಯ ಸಮಸ್ಯೆಗೆ ಪರಿಹಾರ ಸಿಗಲಿದೆ.
ಕಟಕ
ಕೆಲವು ಕಾರಣಕ್ಕೆ ಉದ್ವಿಗ್ನತೆ ಎದುರಿಸುವಿರಿ. ಆತ್ಮೀಯ ಸಂಬಂಧದಲ್ಲಿ ಏರುಪೇರು. ಕಠಿಣ ಧೋರಣೆ ಬಿಟ್ಟು ಹೊಂದಾಣಿಕೆ ರೂಪಿಸಿ.   
ಸಿಂಹ
 ನಿಮ್ಮ ಶ್ರಮಕ್ಕೆ ತಕ್ಕ ಪ್ರತಿ-ಲ ಪಡೆಯುವಿರಿ. ಆತ್ಮವಿಶ್ವಾಸ ಹೆಚ್ಚಳ. ಕುಟುಂಬಸ್ಥರ ಇಷ್ಟಾರ್ಥ ಈಡೇರಿಸಲು ಹೆಚ್ಚು ಹಣ ವ್ಯಯವಾದೀತು.  
ಕನ್ಯಾ
 ಸಮಸ್ಯೆ ರಹಿತ ದಿನವಾಗಿ ಕಂಡರೂ   ಹೊಸ ಸಮಸ್ಯೆಯೊಂದು ನಿಮಗೆ ಅರಿವಿಲ್ಲದೆ ರೂಪುಗೊಳ್ಳುತ್ತಿದೆ.   ಎದುರಿಸಲು ಸನ್ನದ್ಧರಾಗಿ.  
 ತುಲಾ
ಪ್ರಯೋಜನಕ್ಕೆ ಬಾರದ ವಿಷಯದಲ್ಲಿ ಇಂದು ತೊಡಗದಿರಿ. ನಂಬಿದವರ ವರ್ತನೆ ಇಂದು ವಿರುದ್ಧವಾದೀತು. ಆರೋಗ್ಯದಲ್ಲಿ ಏರುಪೇರು    
ವೃಶ್ಚಿಕ
 ಇಷ್ಟಾರ್ಥ ಸಿದ್ಧಿ. ಪ್ರಮುಖ ವಿಷಯದ ಬಗ್ಗೆ ಮನೆಯಲ್ಲಿ ಒಮ್ಮತ ಸಾಽಸಲು ಸ-ಲ. ಕೆಲಸದ ಗೊಂದಲ ನಿವಾರಣೆ. ಕಿರಿಕಿರಿ ಪರಿಹಾರ.
ಧನು
ಏಕತಾನತೆಯ ಕೆಲಸ ಬೇಸರ ತಂದೀತು.  ಕೆಲಸದಲ್ಲಿ ಉತ್ಸಾಹ ತುಂಬಿಕೊಳ್ಳಿ.  ನಡೆನುಡಿಯಲ್ಲಿ ಹೊಸತನ ರೂಢಿಸಿಕೊಳ್ಳಿ.        

ಮಕರ
 ಸಾಧಾರಣ ಯಶಸ್ಸಿನ ದಿನ. ಏಳುಬೀಳು ಎರಡನ್ನೂ ಎದುರಿಸುವಿರಿ. ಅನವಶ್ಯ ವೆಚ್ಚ ತಗ್ಗಿಸಿರಿ. ಮನೆ ಅಥವಾ ವಾಹನ ದುರಸ್ತಿಯ ಸಂಭವ.        
ಕುಂಭ
ದಿನವಿಡೀ ಸಮಸ್ಯೆ ಪರಿಹರಿಸುವಲ್ಲೇ ಸಮಯ ಕಳೆಯುವಿರಿ. ಪ್ರೀತಿಯ ವಿಷಯದಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುವಿರಿ. ಸಹನೆ, ವಿವೇಕದಿಂದ ನಡಕೊಳ್ಳಿ.  
ಮೀನ
ಕೆಲವು ವಿಧಗಳಲ್ಲಿ ನಿಮಗಿಂದು ಅದೃಷ್ಟದ ದಿನ. ಅಭೀಷ್ಟ ಸಿದ್ಧಿ. ಸಮಸ್ಯೆ ಪರಿಹಾರ. ಪ್ರತಿಕೂಲ ಪರಿಸ್ಥಿತಿ  ಪೂರಕ ವಾಗಿ ಬದಲಾಗಲಿದೆ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !