February 9, 2026
Monday, February 9, 2026
spot_img

Happy Morning 🌞| ಆಲಸ್ಯಕ್ಕೆ ಬೈ-ಬೈ, ಆನಂದಕ್ಕೆ ಹಲೋ: ಮುಂಜಾನೆಯ ಹೊಸ ಮಂತ್ರ!

ಬೆಳಗ್ಗೆ ಎದ್ದ ತಕ್ಷಣ ಸುಸ್ತಾಗುವುದು ಅಥವಾ ಕಿರಿಕಿರಿ ಅನುಭವಿಸುವುದು ಇಂದಿನ ಒತ್ತಡದ ಜೀವನದಲ್ಲಿ ಸಾಮಾನ್ಯವಾಗಿದೆ. ಆದರೆ, ಕೇವಲ ಐದು ನಿಮಿಷಗಳ ಸರಿಯಾದ ಹವ್ಯಾಸಗಳು ನಿಮ್ಮ ಇಡೀ ದಿನದ ಗತಿಯನ್ನೇ ಬದಲಿಸಬಲ್ಲವು.

ನಿದ್ರೆಯ ಅಮಲನ್ನು ಕೊಡವಿ, ಮೈ-ಮನಸ್ಸು ಫ್ರೆಶ್ ಆಗಿರಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

ಎದ್ದ ಕೂಡಲೇ ಕಿಟಕಿ ತೆರೆಯಿರಿ. ಸೂರ್ಯನ ಕಿರಣಗಳು ನಿಮ್ಮ ಮೆದುಳಿಗೆ “ಈಗ ಎಚ್ಚರಗೊಳ್ಳುವ ಸಮಯ” ಎಂಬ ಸಂಕೇತ ನೀಡುತ್ತವೆ.

ಎದ್ದ ಕೂಡಲೇ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಿರಿ. ಇದು ನಿಮ್ಮ ಮೆಟಬಾಲಿಸಂ ಅನ್ನು ಚುರುಕುಗೊಳಿಸುತ್ತದೆ.

ಕನಿಷ್ಠ ಮೊದಲ 30 ನಿಮಿಷ ಫೋನ್ ನೋಡಬೇಡಿ. ಬೇರೆಯವರ ಮೆಸೇಜ್‌ಗಳಿಗಿಂತ ನಿಮ್ಮ ಮನಸ್ಸಿನ ಮಾತು ಕೇಳಿಸಿಕೊಳ್ಳಿ.

ಕೇವಲ 10 ನಿಮಿಷಗಳ ಸ್ಟ್ರೆಚಿಂಗ್ ಅಥವಾ ಯೋಗ ಮಾಡಿ. ಇದು ರಕ್ತ ಸಂಚಲನವನ್ನು ಹೆಚ್ಚಿಸಿ ತಕ್ಷಣದ ಎನರ್ಜಿ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !