ಸಬ್ಬಕ್ಕಿ (ಸಾಬುದಾನ) ಸಾಮಾನ್ಯವಾಗಿ ಉಪವಾಸ ಅಥವಾ ಲಘು ಆಹಾರದಲ್ಲಿ ಬಳಸಲಾಗುವ ಪ್ರಮುಖ ಪದಾರ್ಥವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹಾಗೂ ಶಕ್ತಿದಾಯಕ ಅಂಶಗಳು ಅಧಿಕವಾಗಿದ್ದು, ದೇಹಕ್ಕೆ ತಕ್ಷಣ ಶಕ್ತಿ ನೀಡುವ ಗುಣವನ್ನು ಹೊಂದಿದೆ. ಸಬ್ಬಕ್ಕಿ ಕೇವಲ ಶಕ್ತಿ ನೀಡುವುದಲ್ಲದೆ, ಜೀರ್ಣಕ್ರಿಯೆ ಸುಧಾರಿಸುವುದು, ಹಾಗೂ ಹೊಟ್ಟೆಗೆ ಹಿತಕರವಾಗಿರುವುದು ಇದರ ವಿಶೇಷತೆ. ಇವತ್ತು ಸುಲಭವಾಗಿ ತಯಾರಿಸಬಹುದಾದ “ಸಬ್ಬಕ್ಕಿ ಕಿಚಡಿ” ರೆಸಿಪಿ ನೋಡೋಣ.
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ – 1 ಕಪ್
ಜೀರಿಗೆ – 1 ಚಮಚ
ಹೆಚ್ಚಿದ ಹಸಿರುಮೆಣಸಿನ ಕಾಯಿ – 1
ಹೆಚ್ಚಿದ ಟೊಮೆಟೊ – 1
ಹೆಚ್ಚಿದ ಈರುಳ್ಳಿ – 1
ಎಣ್ಣೆ – 2 ಚಮಚ
ಶೇಂಗಾ – 1 ಚಮಚ
ಹೆಚ್ಚಿದ ಆಲೂಗೆಡ್ಡೆ – 1
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಸಬ್ಬಕ್ಕಿಯನ್ನು ನೀರಿನಲ್ಲಿ 30 ನಿಮಿಷ ನೆನೆಸಿಡಬೇಕು. ನಂತರ ಒಂದು ಪ್ಯಾನ್‌ನಲ್ಲಿ ಎಣ್ಣೆ ಕಾದ ಬಳಿಕ ಜೀರಿಗೆ, ಹಸಿರುಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ ಹಾಗೂ ಶೇಂಗಾ ಬೀಜಗಳನ್ನು ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಬೇಕು.
ಈಗ ನೆನೆಸಿಟ್ಟ ಸಬ್ಬಕ್ಕಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ತಿರುಗಿಸಿದರೆ ಬಿಸಿ ಬಿಸಿ ಕಿಚಡಿಯನ್ನು ಸರ್ವ್ ಮಾಡಬಹುದು.