February 9, 2026
Monday, February 9, 2026
spot_img

ಯಂಗ್ ಟೈಗರ್ ವೈಭವ್ ಸೂರ್ಯವಂಶಿಗೆ ಮುಂದಿನ ವಿಶ್ವಕಪ್‌ನಲ್ಲಿಲ್ಲ ಚಾನ್ಸ್! ಏನ್ ಕಾರಣ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನದ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾಗಿದ್ದು 14 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ. ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸಿಡಿಲಿನಂತೆ ಬ್ಯಾಟಿಂಗ್ ಮಾಡಿ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಅವರ ಅದ್ಭುತ ಇನ್ನಿಂಗ್ಸ್‌ನಲ್ಲಿ 15 ಸಿಕ್ಸ್ ಹಾಗೂ 15 ಫೋರ್‌ಗಳು ಸೇರಿದ್ದವು.

ವೈಭವ್ ಅವರ ಶತಕದ ನೆರವಿನಿಂದ ಭಾರತ 50 ಓವರ್‌ಗಳಲ್ಲಿ 411 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 311 ರನ್‌ಗಳಿಗೆ ಆಲೌಟ್ ಆಗಿ 100 ರನ್‌ಗಳ ಅಂತರದಿಂದ ಸೋಲನುಭವಿಸಿತು. ಈ ಪ್ರದರ್ಶನದ ಮೂಲಕ ವೈಭವ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದರು.

ಇದನ್ನೂ ಓದಿ:

ಆದರೆ ಇಷ್ಟೊಂದು ಕಿರಿಯ ವಯಸ್ಸಿನಲ್ಲಿ ಮೆರೆದಿದ್ದರೂ ಮುಂದಿನ ಅಂಡರ್-19 ವಿಶ್ವಕಪ್‌ನಲ್ಲಿ ಅವರಿಗೆ ಅವಕಾಶ ಸಿಗುವುದಿಲ್ಲ. ಬಿಸಿಸಿಐ ನಿಯಮದ ಪ್ರಕಾರ, ಒಬ್ಬ ಆಟಗಾರಿಗೆ ಅಂಡರ್-19 ವಿಶ್ವಕಪ್‌ನಲ್ಲಿ ಒಂದೇ ಬಾರಿ ಮಾತ್ರ ಆಡಲು ಅವಕಾಶ ಇರುತ್ತದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಹಾಗೂ ವಯಸ್ಸಿನ ವಂಚನೆ ತಡೆಯಲು ಈ ನಿಯಮ ಜಾರಿಯಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !