ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬ್ ನಲ್ಲಿ ಆಕ್ಷೇಪಕಾರಿ ವಿಡಿಯೋ ಹಾಕಿರುವ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಮ್.ಡಿ ಗೆ ಆ.23 ರಂದು 10 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಲು ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ.
ವಿಡಿಯೋ ಪ್ರಸಾರ ಮಾಡಿದ ಕುರಿತು ಜು.12 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಮೂರು ಬಾರಿ ನೊಟೀಸ್ ನೀಡಿದ್ರು ವಿಚಾರಣೆಗೆ ಹಾಜರಾಗದೆ ಇರುವ ಕಾರಣ ಆ.21 ರಂದು ಧರ್ಮಸ್ಥಳ ಪೊಲೀಸರು ಬೆಂಗಳೂರು ಬಾಡಿಗೆ ಮನೆಯಿಂದ ಬಂಧಿಸಲು ಹೋಗಿದ್ದರು. ಆದ್ರೆ ಸಂಜೆ ಮಂಗಳೂರು ಕೋರ್ಟ್ ನಿಂದ ಆ.21 ರಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ.
ಹೀಗಾಗಿ ಮತ್ತೆಸಮೀರ್.ಎಮ್.ಡಿ ಗೆ ವಿಚಾರಣೆಗೆ ಖುದ್ದು ಹಾಜರಾಗಲು ನೊಟೀಸ್ ಜಾರಿ ಮಾಡಿದ್ದಾರೆ.