ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿರುವ ಜಪಾನ್, ಡಚ್, ರಾಯಭಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ.
ಕಳೆದ 10 ದಿನಗಳ ಅಂತರದಲ್ಲಿ ದೂತವಾಸ ಕಚೇರಿಗಳಿಗೆ 2ನೇ ಬಾರಿಗೆ ಹಾಕಿರುವ ಬೆದರಿಕೆ ಇದಾಗಿದೆ. ಇಂದು ಬೆಳಗ್ಗೆ ಬೆಳಗ್ಗೆ 8.40ಕ್ಕೆ ರಾಯಭಾರ ಕಚೇರಿಯ ಮೇಲ್-ಐಡಿಗೆ ಬೆದರಿಕೆ ಮೆಸೇಜ್ ಬಂದಿದೆ. ಈ ಹಿನ್ನೆಲೆಯಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಇನ್ನು ಬಾಂಬ್ ಬೆದರಿಕೆ ಇ-ಮೇಲ್ನಲ್ಲಿ ಅಪರಿಚಿತರು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ ಮಾಡಿದ್ದಾರೆ. ಕೋರಮಂಡಲ್ ಹೋಟೆಲ್ನ ಕೊಠಡಿ ಸಂಖ್ಯೆ 536ರಲ್ಲಿ ಸ್ಟಾಲಿನ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ವಿಐಪಿ ಪರಿಚಯ ಮಾಡಿಸುತ್ತೇನೆಂದು ಹೋಟೆಲ್ಗೆ ಕರೆಸಿ ಕೃತ್ಯ ಎಸಗಲಾಗಿದ್ದು, ಅರ್ಜುನ್ ದೊರೆ ರಾಜಶೇಖರ್ ಎಂಬಾತ ಮಹಿಳೆಯನ್ನು ಕರೆದೊಯ್ದಿದ್ದ.
ಹೋಟೆಲ್ಗೆ ಹೋದಾಗ ಸ್ಟಾಲಿನ್ ಅರೆಬೆತ್ತಲಾಗಿ ಕುಳಿತಿದ್ದರು. ಈ ಬಗ್ಗೆ ದೂರು ನೀಡಿದ್ದರೂ ತಮಿಳುನಾಡು ಪೊಲೀಸರು ಕೇಸ್ ಹಾಕಿಲ್ಲ. ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಜಪಾನ್ ದೂತಾವಾಸದ ಶೌಚಾಲಯದಲ್ಲಿ 4 RDX, IED ಬಾಂಬ್ ಇಟ್ಟಿದ್ದೇವೆ ಎಂದು ಉಲ್ಲೇಖಿಸಿರೋದು ಕಂಡುಬಂದಿದೆ.



