ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಪೂರ್ವಜರ ಊರಿಗೆ ಭೇಟಿ ನೀಡಿ ಪೂರ್ವಾಶ್ರಮದ ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ಪುಟ್ಟ ಮಕ್ಕಳ ಜೊತೆ ಕಾಲ ಕಳೆದಿದ್ದು, ಅವರಿಗೆ ಚಾಕೋಲೇಟ್ ನೀಡಿದ್ದಾರೆ. ಸಿಎಂ ಆಧಿತ್ಯನಾಥ್ ಅವರ ಪೂರ್ವಜರ ಊರು ಉತ್ತರಾಖಂಡ್‌ನ ಪಂಚೂರ್ ಎಂಬ ಹಳ್ಳಿಯಲ್ಲಿದೆ. ಬಹಳ ವರ್ಷಗಳ ನಂತರ ಅಲ್ಲಿಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅಲ್ಲಿನ ಜನರ ಕ್ಷೇಮ ವಿಚಾರಿಸಿದರು.

ಗ್ರಾಮದ ಮಕ್ಕಳ ಜೊತೆ ಮಾತುಕತೆ ನಡೆಸಿದ ಅವರು ಅವರಿಗೆ ಚಾಕೋಲೇಟ್ ನೀಡಿದರು. ಒಂದು ಮಗುವನ್ನು ತೊಡೆ ಮೇಲೆ ಕೂರಿಸಿಕೊಂಡ ಸಿಎಂ, ಅತನ ಜೊತೆ ಪ್ರೀತಿಯಿಂದಆಟವಾಡಿದರು. ಮಕ್ಕಳು ಕೂಡ ಅಷ್ಟೇ ಪ್ರೀತಿಯಿಂದ ಅವರ ಜೊತೆ ಮಾತನಾಡಿದರು. ಗ್ರಾಮಸ್ಥರು ಸಿಎಂ ಜೊತೆ ಖುಷಿ ಖುಷಿಯಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ತಾಯಿ ಜೊತೆ ಸಿಎಂ ಯೋಗಿ
ಈ ವೇಳೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಿಎಂ, ಅಲ್ಲಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿಯವರ ವಿನಮ್ರತೆ, ಸರಳತೆ ಮತ್ತು ಆತ್ಮೀಯತೆಯನ್ನು ಕಂಡು ಸ್ಥಳೀಯ ನಿವಾಸಿಗಳು ತೀವ್ರ ಭಾವುಕರಾದರು.



