September 30, 2026
Wednesday, September 30, 2026
spot_img

ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟ, ಇಬ್ಬರ ಆರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆ. ಆರ್‌. ಪುರಂ ವ್ಯಾಪ್ತಿಯ ಮಂಜುನಾಥ ಲೇಔಟ್‌ನ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟವಾಗಿದೆ.

ಇಡೀ ಮನೆಯಲ್ಲಿ ಬೆಂಕಿ ಕಾಣಿಸಿದ್ದು, ಮನೆಯ ಮಾಲೀಕರಾದ ಪೂರ್ಣಿಮಾ ಹಾಗೂ ಬಾಡಿಗೆದಾರರಾದ ವೆಂಕಟೇಷ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮನೆಯೊಂದರಿಂದ ಅನಿಲ ಸೋರಿಕೆ ವಾಸನೆ ಬರುತ್ತಿರುವುದಾಗಿ ವೆಂಕಟೇಶ್ ಪೂರ್ಣಿಮಾಗೆ ಹೇಳಿದ್ದಾರೆ.

ಬಳಿಕ ಮನೆಗೆ ಬಂದ ಪೂರ್ಣಿಮಾ ಲೈಟ್ ಆನ್ ಮಾಡಿದ ನಂತರ ಬೆಂಕಿ ಹೊತ್ತಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೊದಲ ಮನೆಯಲ್ಲಿ ಪೂರ್ಣಿಮಾ ವಾಸವಿದ್ದರು. ಮೇಲಿನ ಮಹಡಿಯಲ್ಲಿ ಇತರ ಎರಡು ಮನೆಗಳಿವೆ. ಘಟನೆ ಸಂಭವಿಸಿದಾಗ ಮನೆಯ ಬಾಡಿಗೆದಾರರು ಕೆಲಸಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read