September 27, 2026
Sunday, September 27, 2026
spot_img

ಬ್ಯಾಟಿಂಗ್ ಸ್ಟೈಲ್ ನೋಡಿ ಬೆರಗಾದ ಫ್ಯಾನ್ಸ್! ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡದ ಆಲ್‌ರೌಂಡ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆಂಧ್ರ ಪ್ರದೇಶ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿರುವ ಬೆಂಗಾಲ್ ತಂಡ, ಮೊದಲ ಇನಿಂಗ್ಸ್‌ನಲ್ಲೇ ಭಾರೀ ಮೊತ್ತ ದಾಖಲಿಸಿದೆ.

ಬೆಂಗಾಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಅಭಿಮನ್ಯು ಈಶ್ವರನ್ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಆಂಧ್ರ ತಂಡ 295 ರನ್‌ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ:

ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ಬೆಂಗಾಲ್ ಪರ ಸುದೀಪ್ ಕುಮಾರ್ ದ್ವಿಶತಕ ಸಿಡಿಸಿ ತಂಡಕ್ಕೆ ಭದ್ರ ನೆಲೆ ನೀಡಿದರು. ಸುಮಂತ ಗುಪ್ತಾ 81 ರನ್, ಶಕೀರ್ ಹಬೀಬಿ 95 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಶಮಿ ಸ್ಫೋಟಕ ಬ್ಯಾಟಿಂಗ್ ನಡೆಸಿ 33 ಎಸೆತಗಳಲ್ಲಿ 53 ರನ್ ಸಿಡಿಸಿ ಗಮನ ಸೆಳೆದರು.

ಈ ಪ್ರದರ್ಶನದ ನೆರವಿನಿಂದ ಬೆಂಗಾಲ್ ಮೊದಲ ಇನಿಂಗ್ಸ್‌ನಲ್ಲಿ 629 ರನ್ ಕಲೆಹಾಕಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಂಧ್ರ ತಂಡ 30 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಪಂದ್ಯ ಡ್ರಾ ಆಗುವ ಅಥವಾ ಬೆಂಗಾಲ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

Must Read