February 10, 2026
Tuesday, February 10, 2026
spot_img

‘ಕರ್ಮ ತತ್ವ ನನಗೆ ಬಹಳ ಸ್ಪೆಷಲ್’! ಹಿಂದು ಧರ್ಮ, ಸಂಸ್ಕೃತಿ ಬಗ್ಗೆ ‘ಭಾರತದ ಅಳಿಯ’ನ ಬಾಯಿಂದ ಬಂತು ಮುತ್ತಿನಂತಹ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲಿವುಡ್ ಗಾಯಕ ಹಾಗೂ ನಟ ನಿಕ್ ಜೋನಸ್ ಇತ್ತೀಚಿನ ಸಂದರ್ಶನದಲ್ಲಿ ಭಾರತದ ಸಂಸ್ಕೃತಿ ಮತ್ತು ಹಿಂದು ಧರ್ಮದ ಬಗ್ಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಜೊತೆಗಿನ ವಿವಾಹದ ಬಳಿಕ ಭಾರತಕ್ಕೆ ಹೆಚ್ಚು ಹತ್ತಿರವಾಗಿರುವ ನಿಕ್, ಇಲ್ಲಿ ಇರುವ ಸಂಪ್ರದಾಯಗಳು ಹಾಗೂ ಮೌಲ್ಯಗಳು ತನ್ನ ಜೀವನದ ಭಾಗವಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

‘ಜಾಕ್ ಸಾಂಗ್ ಶೋ’ನಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ಕರ್ಮ ಸಿದ್ಧಾಂತ ತನ್ನ ಮೇಲೆ ದೊಡ್ಡ ಪ್ರಭಾವ ಬೀರಿದೆ ಎಂದು ತಿಳಿಸಿದ್ದಾರೆ. ಒಳ್ಳೆಯದು ಮಾಡಿದರೆ ಒಳ್ಳೆಯದೇ ಮರಳಿ ಬರುತ್ತದೆ ಎಂಬ ಆಲೋಚನೆ ತಮಗೆ ತುಂಬಾ ಇಷ್ಟ ಎಂದಿದ್ದಾರೆ. ಜೊತೆಗೆ ಭಾರತೀಯ ಹಬ್ಬಗಳನ್ನು ಈಗ ಕುಟುಂಬದೊಂದಿಗೆ ಖುಷಿಯಿಂದ ಆಚರಿಸುತ್ತಿರುವುದಾಗಿ ಹೇಳಿದ್ದಾರೆ.

ತಮ್ಮ ಪುತ್ರಿ ಮಾಲತಿ ಮೇರಿ ಅವರನ್ನು ಹಿಂದು ಮತ್ತು ಕ್ರಿಶ್ಚಿಯನ್ ಮೌಲ್ಯಗಳ ಸಮನ್ವಯದಲ್ಲಿ ಬೆಳೆಸಲು ಬಯಸುತ್ತಿರುವುದಾಗಿ ನಿಕ್ ಹೇಳಿದ್ದಾರೆ. ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರನ್ನು ಪ್ರೀತಿಯಿಂದ ‘ಭಾರತದ ಅಳಿಯ’ ಎಂದು ಕರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !