September 30, 2026
Wednesday, September 30, 2026
spot_img

FOOD | ಬಾಯಲ್ಲಿ ನೀರೂರಿಸುವ ಸೂಪರ್ ಸ್ಪೈಸಿ ಚೆಟ್ಟಿನಾಡ್ ಚಿಕನ್ ಈಗ ಮನೆಯಲ್ಲೇ ಮಾಡ್ಬಹುದು

ಮಧ್ಯಾಹ್ನದ ಊಟಕ್ಕೆ ಪ್ರತಿದಿನ ಒಂದೇ ತರದ ಕರಿ ತಿಂದು ಬೇಸತ್ತು ಹೋಗಿದ್ದೀರಾ? ಇಂದು ನಿಮ್ಮ ಲಂಚ್ ಪ್ಲೇಟಿಗೆ ದಕ್ಷಿಣ ಭಾರತದ ಖಾರ-ಸುವಾಸನೆಯ ಸ್ಪೆಷಲ್ ಡಿಶ್ ತರೋಣ. ತಮಿಳುನಾಡಿನ ಪ್ರಸಿದ್ಧ ಚೆಟ್ಟಿನಾಡ್ ಚಿಕನ್ ಮಸಾಲೆಯ ತೀವ್ರ ರುಚಿ, ಕರಿಬೇವಿನ ಸುವಾಸನೆ ಮತ್ತು ತಾಜಾ ರೋಸ್ಟ್ ಮಸಾಲೆಯಿಂದ ಊಟದ ರುಚಿಯನ್ನು ಡಬಲ್ ಮಾಡುತ್ತದೆ. ಬಿಸಿ ಅನ್ನ, ಜೋಳದ ರೊಟ್ಟಿ ಅಥವಾ ಪರೋಟ ಜೊತೆ ಇದು ಸೂಪರ್ ಕಾಂಬಿನೇಷನ್.

ಬೇಕಾಗುವ ಪದಾರ್ಥಗಳು

ಚಿಕನ್ – 500 ಗ್ರಾಂ
ಅರಿಶಿನ – ½ ಟೀ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನಿಂಬೆ ರಸ – 1 ಚಮಚ
ಈರುಳ್ಳಿ – 2
ಕರಿಬೇವು – ಸ್ವಲ್ಪ
ಎಣ್ಣೆ / ಎಳ್ಳೆಣ್ಣೆ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆಗೆ
ಕೊತ್ತಂಬರಿ ಬೀಜ – 1 ಚಮಚ
ಜೀರಿಗೆ – 1 ಟೀ ಚಮಚ
ಸೋಂಪು – 1 ಟೀ ಚಮಚ
ಕಾಳುಮೆಣಸು – ½ ಟೀ ಚಮಚ
ಒಣ ಮೆಣಸಿನಕಾಯಿ – 4 ರಿಂದ 5
ದಾಲ್ಚಿನ್ನಿ, ಲವಂಗ – ಸ್ವಲ್ಪ
ತೆಂಗಿನ ತುರಿ – 2 ಚಮಚ

ಮಾಡುವ ವಿಧಾನ

ಮೊದಲು ಚಿಕನ್‌ಗೆ ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆ ರಸ ಹಾಕಿ 30 ನಿಮಿಷ ಮ್ಯಾರಿನೇಟ್ ಮಾಡಿ.

ನಂತರ ಮಸಾಲೆ ಪದಾರ್ಥಗಳನ್ನು ಸ್ವಲ್ಪ ಹುರಿದು ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಮತ್ತು ಕರಿಬೇವು ಹುರಿದು, ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.

ಆಮೇಲೆ ರುಬ್ಬಿದ ಮಸಾಲೆ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮುಚ್ಚಳ ಹಾಕಿ ಚಿಕನ್ ಚೆನ್ನಾಗಿ ಬೇಯುವವರೆಗೆ ಕುದಿಸಿ.

ಎಣ್ಣೆ ಮೇಲಕ್ಕೆ ಬರುವಷ್ಟರಲ್ಲಿ ಗ್ಯಾಸ್ ಆಫ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.

ಬಿಸಿ ಅನ್ನ ಜೊತೆ ಇದ್ರ ರುಚಿ ಸಖತ್!

Must Read