September 30, 2026
Wednesday, September 30, 2026
spot_img

FOOD | ತಣ್ಣಗಾದ್ರೂ ರುಚಿ ಕಡಿಮೆಯಾಗೋದಿಲ್ಲ, ಈ ಬದನೆಕಾಯಿ ಖಾರಾಬಾತ್‌ ಇಂದೇ ಟ್ರೈ ಮಾಡಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಹಿಂಗ್‌ ಹಾಕ
ನಂತರ ಇದಕ್ಕೆ ಈರುಳ್ಳಿ ಹಾಗೂ ಬದನೆಕಾಯಿ ಹಾಕಿ ಬಾಡಿಸಿ
ಬದನೆಕಾಯಿ ಸ್ವಲ್ಪ ಬಾಡಿದ ನಂತರ ಉಪ್ಪು, ಖಾರದಪುಡಿ, ಗರಂ ಮಸಾಲಾ, ವಾಂಗಿಭಾತ್‌ ಪುಡಿ ಹಾಕಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ

ಆಮೇಲೆ ಎರಡು ಲೋಟ ನೀರು ಹಾಕಿ
ನೀರು ಕುದಿಯುವ ವೇಳೆಗೆ ಉಪ್ಪು ನೋಡಿ, ಒಂದು ಸ್ಪೂನ್‌ ತುಪ್ಪ ಹಾಕಿ
ನಂತರ ಒಂದು ಲೋಟ ಹುರಿದ ಬನ್ಸಿ ರವೆ ಹಾಕಿ
ಆಮೇಲೆ ನೀರು ಆರಿದ ನಂತರ ಆಫ್‌ ಮಾಡಿ, ಕೊತ್ತಂಬರಿ ಸೊಪ್ಪು ಹಾಗೂ ಕಾಯಿತುರಿ ಹಾಕಿ ಬಿಡಿ
ಐದು ನಿಮಿಷದ ನಂತರ ತೆಗೆದು ಬಿಸಿ ಬಿಸಿ ತಿನ್ನಿ. ಬಾಕ್ಸಿಗೆ ಹಾಕಿಕೊಂಡು ತಣ್ಣಗಾದ್ರೂ ಪರವಾಗಿಲ್ಲ. ಇದರ ರುಚಿ ಅದ್ಭುತವಾಗಿ ಇರುತ್ತದೆ.

Must Read