September 27, 2026
Sunday, September 27, 2026
spot_img

ಸೆನ್ಸಾರ್ ಮಂಡಳಿ ವಿರುದ್ಧದ ಅರ್ಜಿ ಹಿಂಪಡೆದ KVN ಸಂಸ್ಥೆ: ಮುಂದೇನಾಗುತ್ತೆ ‘ಜನ ನಾಯಗನ್’ ಭವಿಷ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರಕದ ಹಿನ್ನೆಲೆ ನಿರ್ಮಾಣ ಸಂಸ್ಥೆ ಕೆವಿಎನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಇದೀಗ ಆ ಅರ್ಜಿಯನ್ನು ಹಿಂಪಡೆಯಲಾಗಿದ್ದು, ಮುಂದಿನ ಕ್ರಮ ಏನು ಎಂಬ ಕುತೂಹಲ ಮೂಡಿಸಿದೆ.

ಜನವರಿ 9ರಂದು ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶದಿಂದಲೇ ಡಿಸೆಂಬರ್‌ನಲ್ಲಿ ಸೆನ್ಸಾರ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಮಾಣಪತ್ರ ಸಿಗದ ಕಾರಣ ತುರ್ತು ಅರ್ಜಿ ಸಲ್ಲಿಸಿದ್ದ ತಂಡಕ್ಕೆ, ಕೋರ್ಟ್ ಸೆನ್ಸಾರ್ ಮಂಡಳಿಗೆ ಪ್ರಮಾಣಪತ್ರ ನೀಡುವಂತೆ ಸೂಚನೆ ನೀಡಿತ್ತು. ಆದರೆ ಅದೇ ದಿನ ಮೇಲ್ಮಟ್ಟದಲ್ಲಿ ಆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಲಾಯಿತು.

ಇದನ್ನೂ ಓದಿ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಂಗಳಾದರೂ ಅಂತಿಮ ತೀರ್ಮಾನ ಹೊರಬರದ ಹಿನ್ನೆಲೆಯಲ್ಲಿ, ಚಿತ್ರತಂಡ ಈಗ ಪರಿಷ್ಕರಣಾ ಸಮಿತಿಗೆ ಮೊರೆ ಹೋಗಲು ನಿರ್ಧರಿಸಿದೆ. ಅಲ್ಲಿ ವೀಕ್ಷಣೆ ಬಳಿಕ 15 ದಿನಗಳಲ್ಲಿ ಪ್ರಮಾಣಪತ್ರ ಸಿಗುವ ಸಾಧ್ಯತೆ ಇದೆ. ಫೆಬ್ರವರಿ ಕೊನೆಯಲ್ಲಿ ಪ್ರಮಾಣಪತ್ರ ದೊರಕಿದರೆ ಮಾತ್ರ ಸಿನಿಮಾ ಬಿಡುಗಡೆಯಾಗಬಹುದು. ಇದಲ್ಲದೆ, ತಮಿಳುನಾಡಿನ ಚುನಾವಣೆ ಘೋಷಣೆಯಾದರೆ ಮತ್ತಷ್ಟು ವಿಳಂಬವಾಗುವ ಆತಂಕವೂ ತಂಡದಲ್ಲಿದೆ.

Must Read