September 26, 2026
Saturday, September 26, 2026
spot_img

ಜ್ಞಾನಸತ್ರವಾಗಿ ಹೊಸ ದಾಖಲೆ ಬರೆದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಸೀಮೋಲ್ಲಂಘನದೊಂದಿಗೆ ಸಂಪನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಶ್ರೀರಾಮಚಂದ್ರಾಪುರ ಮಠದ ಮೂಲಮಠ ಗೋಕರ್ಣದ ಅಶೋಕೆಯಲ್ಲಿ ಕಳೆದ ಎರಡು ತಿಂಗಳಿನಿಂದ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಸೀಮೋಲ್ಲಂಘನ ಮೂಲಕ ತಮ್ಮ ಚಾತುರ್ಮಾಸ್ಯ ವ್ರತ ಸಂಪನ್ನಗೊಳಿಸಿದರು.


ಗಂಗಾವಳಿ ನದಿಗೆ ಫಲ ಸಮರ್ಪಿಸಿ, ತೊರ್ಕೆಯ ಕೆಂಗಾಳ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಶ್ರೀಗಳು, ಭಕ್ತರನ್ನು ಆಶೀರ್ವಾದಿಸಿದರು. ಪ್ರದೀಪ್ ನಾಯ್ಕ್ ದೇವರಬಾವಿ, ಮಹೇಶ್ ಶೆಟ್ಟಿ, ವೆಂಕಟರಮಣ ಕೌರಿ, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


ಆಹಾರದ ಕುರಿತಾದ ಪ್ರವಚನ, ಪಾರಂಪರಿಕ ಭೋಜನ


ಆಹಾರದ ಕುರಿತಾಗಿ ಪೀಠಾಧಿಪತಿಗಳೊಬ್ಬರು ಸವಿಸ್ತಾರವಾಗಿ ಸಮಾಜಕ್ಕೆ ಪ್ರವಚನದ ಮೂಲಕ ಮಾರ್ಗದರ್ಶನ ಮಾಡಿದ್ದು ಇದೇ ಮೊದಲಾಗಿದ್ದು, ಹೊಸ ದಾಖಲೆ ಬರೆದಿದೆ. ಇಂದಿನ ಕಾಲಕ್ಕೆ ಅತ್ಯಗತ್ಯವಾದ ವಿಚಾರವನ್ನು ರಾಘವೇಶ್ವರ ಶ್ರೀಗಳು ತಮ್ಮ ಚಾತುರ್ಮಾಸ್ಯದ 60 ದಿನಗಳ ಕಾಲದ ಪ್ರವಚನದ ಮೂಲಕ ಆಹಾರದ ಸರಿ ತಪ್ಪುಗಳನ್ನು ತಿಳಿಸಿದರು. ಹಾಗೆಯೇ 60 ದಿನಗಳು ಕರಾವಳಿ, ಮಲೆನಾಡು ಭಾಗದ ಪಾರಂಪರಿಕ ಆಹಾರ ಪದಾರ್ಥಗಳು ಕೂಡಾ ಈ ಬಾರಿಯ ಚಾತುರ್ಮಾಸ್ಯದ ವಿಶೇಷವಾಗಿತ್ತು.


ಸರ್ವ ಸಮಾಜದ ಪಾಲ್ಗೊಳ್ಳುವಿಕೆ


ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಭಕ್ತ ಸಮಾಜದವರೆಲ್ಲರೂ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ೨೩ ವಿವಿಧ ಸಮಾಜಗಳು ಸ್ವರ್ಣಪಾದುಕಾ ಪೂಜೆಯನ್ನು ಸಮರ್ಪಿಸಿ, ತಮ್ಮ ಪರಂಪರಾಗತ ಗುರು ಭಕ್ತಿಯನ್ನು ವ್ಯಕ್ತಪಡಿಸಿದರು.

Must Read