April 16, 2026
Thursday, April 16, 2026
spot_img

ಮದುವೆಯಲ್ಲಿ ಕೈಯಲ್ಲಿ ಗನ್ ಹಿಡಿದು ಕಾಂಗ್ರೆಸ್ ಮುಖಂಡನ ಬಿಲ್ಡಪ್: ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಹೊಸ ದಿಗಂತ ವರದಿ,ಕಲಬುರಗಿ:

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೊಂದರಲ್ಲಿ ಕಾಂಗ್ರೆಸ್ ಮುಖಂಡ ಕೈಯಲ್ಲಿ ಗನ್ ಹಿಡಿದು ಸಿನಿಮಾ ಶೈಲಿಯಲ್ಲಿ ಬಿಲ್ಡಪ್ ನೀಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ಅಫ್ಜಲ್ಪುರ್ ತಾಲೂಕಿನ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಆಪ್ತ, ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಮದುವೆಯ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್,ನ ಯಶಸ್ವಿ ಚಿತ್ರ ಧುರಂಧರ ಸಿನೆಮಾದ ಹಾಡಿನೊಂದಿಗೆ ಸಿನಿಮಾ ಶೈಲಿಯೇ ಎಂಟ್ರಿ ಕೊಟ್ಟ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿ, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನೂ ಈ ಬಗ್ಗೆ ಕಲಬುರಗಿ ಕಮಿಷನರ್ ಡಾ.ಶರಣಪ್ಪ ಎಸ್ ಡಿ ಕೂಡ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ತನಿಖೆ ನಡೆಸಲು ಸ್ಥಳೀಯ ಪೋಲಿಸರಿಗೆ ತಿಳಿಸಲಾಗಿದ್ದು, ಶಸ್ತ್ರಾಸ್ತ್ರ ಹಿಡಿದು ಸಾರ್ವಜನಿಕರಿಗೆ ಭಯ ಮೂಡಿಸುವ ರೀತಿ ನಡೆದುಕೊಂಡರೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಆಯೋಜಕರು ಮತ್ತು ಸ್ಥಳದ ವಿವರ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಿತವರ ಹೇಳಿಕೆ ಪಡೆಯುವ ಕಾರ್ಯವೂ ನಡೆದಿದ್ದು, ತನಿಖೆಯ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !