February 11, 2026
Wednesday, February 11, 2026
spot_img

ದಿನಭವಿಷ್ಯ: ಜವಾಬ್ದಾರಿಗಳು ಹೆಚ್ಚಲಿವೆ, ಆಪ್ತರೊಂದಿಗೆ ಸಮಯ ಕಳೆದು ಮನಸ್ಸು ಹಗುರ ಮಾಡಿಕೊಳ್ಳಿ

ಮೇಷ
ಅಹಿತಕರ ಭಾವ. ಅನಿಶ್ಚಿತತೆ. ವಿರಾಮ ಪಡೆಯುವ ಇಚ್ಛೆ -ಲಿಸದು. ಆಪ್ತರ ಸಂಗದಲ್ಲಿ ಸಮಾಧಾನ.
ವೃಷಭ
ಹೆಚ್ಚು ಹೊಣೆ. ನೆರವು ಯಾಚಿಸಲು ಹಿಂಜರಿಕೆ ಬೇಡ. ಉದ್ದಿಮೆಯಲ್ಲಿ ಹಿನ್ನಡೆ. ಅವಿವಾಹಿತರಿಗೆ  ಸಂಗಾತಿ ಹುಡುಕಾಟ.      
ಮಿಥುನ
ಅಽಕ ಕೆಲಸ ಮತ್ತು ಮೋಜು ಎರಡೂ ನಿಮ್ಮದಾಗಲಿದೆ. ಅನ್ಯರ ವ್ಯವಹಾರದಲ್ಲಿ ನಿಮಗೂ ಲಾಭ ದೊರಕೀತು. ಕೌಟುಂಬಿಕ ಸಾಮರಸ್ಯ.        
ಕಟಕ
   ಕುಟುಂಬದಿಂದ ಅನಿರೀಕ್ಷಿತ ಕೊಡುಗೆ. ವೃತ್ತಿ ಸಂಬಂಽತ ಪ್ರಯಾಣ ಸುಖಕರ, ಉದ್ದೇಶ ಸಾಧನೆ. ಆಪ್ತರೊಬ್ಬರು ಮುನಿಸು ತೋರಿಯಾರು.                
ಸಿಂಹ
 ವೃತ್ತಿ ಮತ್ತು ಖಾಸಗಿ ಹಿತಾಸಕ್ತಿ ಎರಡರ ಮಧ್ಯೆ ಸಮತೋಲನ ಸಾಧಿಸಲು ಸಫಲ. ಆದರೆ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು.    
ಕನ್ಯಾ
ಕೆಲ ವಿಷಯಕ್ಕೆ ಅತಿರೇಕದ ಉತ್ಸುಕತೆ ತೋರದಿರಿ. ಬಳಿಕ ನಿರಾಶೆ ಆದೀತು. ಆಹಾರದಲ್ಲಿ ಹಿತಮಿತ ಸಾಽಸಿ. ಆರೋಗ್ಯಕ್ಕೆ ಹಿತಕರ.    
ತುಲಾ
ನಿಮ್ಮ ಕಾರ್ಯಶೈಲಿಗೆ ಇನ್ನಷ್ಟು ನಾವೀನ್ಯತೆ ಅಳವಡಿಸಿ. ಕೆಲಸದಲ್ಲಿ ಸದಾ ಧಾವಂತ ತೋರುವ ನೀವು ಸ್ವಲ್ಪ ನಿಧಾನಗತಿ ತೋರುವುದು ಒಳಿತು.              
ವೃಶ್ಚಿಕ
ಏರುಪೇರು ಇಲ್ಲದ ಸಾಧಾರಣ ದಿನ. ಹಾಗಾಗಿ ದೊಡ್ಡ ಕಾರ್ಯಕ್ಕೆ ಕೈ ಹಾಕದಿರಿ. ವಿವಾಹಿತರಿಗೆ ಶುಭ ಬೆಳವಣಿಗೆ. ಆರ್ಥಿಕ ಪ್ರಗತಿಗೆ ಅಡ್ಡಿ ತೋರಲಿದೆ.    
ಧನು
ನಿರ್ವಹಣೆಯಿಂದ ಇತರರನ್ನು ಮೆಚ್ಚಿಸುವ ಪ್ರಯತ್ನ ಫಲ ನೀಡಲಿದೆ. ಆದರೆ ವಿನಯ ಬಿಡದಿರಿ. ಅಹಂಭಾವದ ವರ್ತನೆ ಪ್ರತಿಕೂಲವಾದೀತು.            
ಮಕರ
ಆತ್ಮವಿಶ್ವಾಸ ಮತ್ತು ಸಮರ್ಥ ನಿರ್ವಹಣೆ ನಿಮ್ಮ ಕುರುಹಾಗಲಿದೆ.  ಅನ್ಯರ ದೌರ್ಬಲ್ಯವನ್ನು ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುವಿರಿ.
ಕುಂಭ
 ಆಪ್ತರ ಸಾಮಿಪ್ಯದಲ್ಲಿ ಖುಷಿ ಕಾಣುವಿರಿ. ಆದರೆ ಅವರ ಮೇಲೆ ಅಧಿಪತ್ಯ ಸಾಽಸುವ ಪ್ರಯತ್ನ ಬೇಡ. ಸೌಹಾರ್ದದಿಂದ ಕಾರ್ಯ ಸಾಧಿಸಿರಿ.        
 ಮೀನ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಪೂರಕ ಬೆಳವಣಿಗೆ. ಬುದ್ಧಿವಂತಿಕೆಯಿಂದ ಹಣ ವ್ಯಯಿಸಿರಿ. ಆತ್ಮೀಯರ ಸಂಗದಲ್ಲಿ ಹರುಷ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !