April 12, 2026
Sunday, April 12, 2026
spot_img

ಇನ್ಮುಂದೆ ‘ವಂದೇ ಮಾತರಂ’ ಧ್ವನಿ ಕಡ್ಡಾಯ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಶಿಷ್ಟಾಚಾರ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ರಾಷ್ಟ್ರಗೀತೆ ‘ಜನಗಣಮನ’ಕ್ಕೆ ಇರುವಂತೆಯೇ, ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ನಿಯಮಗಳು ಏನು?

ಈ ಹಿಂದೆ ಕೇವಲ ಮೊದಲ ಚರಣವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇನ್ಮುಂದೆ 6 ಚರಣಗಳಿರುವ ಪೂರ್ಣ ಗೀತೆಯನ್ನು ಹಾಡುವುದು ಅಥವಾ ನುಡಿಸುವುದು ಕಡ್ಡಾಯ.

ಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಉಪಸ್ಥಿತರಿರುವವರೆಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲುವ ಮೂಲಕ ಗೌರವ ಸಲ್ಲಿಸಬೇಕು.

ಯಾವಾಗ ಹಾಡಬೇಕು?

ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ.

ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿಗಳು ನೀಡುವ ಭಾಷಣಗಳ ಮೊದಲು ಮತ್ತು ನಂತರ.

ರಾಷ್ಟ್ರಧ್ವಜಾರೋಹಣ ಮತ್ತು ಔಪಚಾರಿಕ ರಾಜ್ಯ ಸಮಾರಂಭಗಳಲ್ಲಿ.

ದೂರದರ್ಶನ ಹಾಗೂ ಆಕಾಶವಾಣಿಯ ವಿಶೇಷ ಕಾರ್ಯಕ್ರಮಗಳ ಆರಂಭ ಮತ್ತು ಅಂತ್ಯದಲ್ಲಿ.

ಇದನ್ನೂ ಓದಿ:

ಈ ನೂತನ ಆದೇಶವನ್ನು ಈಗಾಗಲೇ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ರವಾನಿಸಲಾಗಿದೆ. ಈವರೆಗೆ ರಾಷ್ಟ್ರಗೀತೆಗೆ ಮಾತ್ರ ಸೀಮಿತವಾಗಿದ್ದ ಕಟ್ಟುನಿಟ್ಟಿನ ಶಿಷ್ಟಾಚಾರಗಳು ಈಗ ರಾಷ್ಟ್ರೀಯ ಗೀತೆಗೂ ಅನ್ವಯವಾಗಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !