ಹೊರಗೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರು ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದಾರೆ. ಎಸಿ ಅಥವಾ ಕೂಲರ್ ಇಲ್ಲದಿದ್ದರೂ ಮನೆಯಲ್ಲೇ ಆರಾಮವಾಗಿ ಮತ್ತು ತಂಪಾಗಿರಲು ಈ ಕೆಳಗಿನ ಉಪಾಯಗಳನ್ನು ಮಾಡಬಹುದು:
ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮನೆಯ ಕಿಟಕಿಗಳನ್ನು ಮುಚ್ಚಿ ಮತ್ತು ದಪ್ಪನೆಯ ಪರದೆಗಳನ್ನು ಹಾಕಿ. ಇದರಿಂದ ಬಿಸಿ ಗಾಳಿ ಮತ್ತು ಸೂರ್ಯನ ಕಿರಣಗಳು ನೇರವಾಗಿ ಮನೆ ಪ್ರವೇಶಿಸುವುದನ್ನು ತಡೆಯಬಹುದು.
ಕಿಟಕಿಗಳಿಗೆ ಒದ್ದೆಯಾದ ಸುಗಂಧಭರಿತ ಪರದೆ ಅಥವಾ ತೆಳುವಾದ ಕಾಟನ್ ಬಟ್ಟೆಗಳನ್ನು ಹಾಕುವುದರಿಂದ ಒಳಗೆ ಬರುವ ಗಾಳಿ ತಂಪಾಗಿರುತ್ತದೆ.
ಮನೆಯ ಒಳಗೆ ‘ಇನ್-ಡೋರ್’ ಗಿಡಗಳನ್ನು ಬೆಳೆಸುವುದರಿಂದ ಆಮ್ಲಜನಕ ಹೆಚ್ಚಾಗುವುದಲ್ಲದೆ ಮನೆಯ ಉಷ್ಣಾಂಶ ಕಡಿಮೆಯಾಗುತ್ತದೆ.
ಸತತವಾಗಿ ನೀರು ಕುಡಿಯುವುದು, ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳ ಮೊರೆ ಹೋಗುವುದು ಉತ್ತಮ. ಲಘುವಾದ ಕಾಟನ್ ಬಟ್ಟೆಗಳನ್ನು ಧರಿಸುವುದು ನಿಮ್ಮನ್ನು ಆರಾಮವಾಗಿರಿಸುತ್ತದೆ.
ಹಗಲಿನಲ್ಲಿ ಅತಿ ಹೆಚ್ಚು ಶಾಖ ಹೊರಸೂಸುವ ವಿದ್ಯುತ್ ದೀಪಗಳನ್ನು ಆಫ್ ಮಾಡಿಡಿ. ಸಾಧ್ಯವಾದಷ್ಟು ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ.



