ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ವಿಭಿನ್ನ ಬೌಲಿಂಗ್ ಶೈಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅವರ ಎಸೆತಕ್ಕೆ ಕ್ಯಾಮರೋನ್ ಗ್ರೀನ್ ಔಟಾದ ಬಳಿಕ, ಬೌಲಿಂಗ್ ಕ್ರಮದ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ಚೆಂಡು ಎಸೆಯುವ ಮುನ್ನ ತೆಗೆದುಕೊಳ್ಳುವ ವಿರಾಮವು ಬ್ಯಾಟರ್‌ಗಳ ಗಮನ ಸೆಳೆಯುತ್ತಿದ್ದು, ಈ ವಿಚಾರ ಟಿ20 ವಿಶ್ವಕಪ್ ವೇಳೆಯೂ ಮುಂದುವರಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ಕ್ರಿಕೆಟಿಗ ಶ್ರೀವಾಸ್ತವ್ ಗೋಸ್ವಾಮಿ, ಈ ರೀತಿಯ ವಿಳಂಬ ಎಸೆತಗಳನ್ನು ಅನುಮತಿಸಬಾರದು ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ರವಿಚಂದ್ರನ್ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಬ್ಯಾಟರ್‌ಗಳಿಗೆ ದೊರೆಯುವ ಸ್ವಾತಂತ್ರ್ಯವನ್ನು ಉಲ್ಲೇಖಿಸಿ, ಬೌಲರ್‌ಗಳಿಗೆ ಮಾತ್ರ ಕಠಿಣ ನಿಯಮಗಳಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:
ಬ್ಯಾಟರ್‌ಗಳು ಸ್ವಿಚ್ ಹಿಟ್ ಅಥವಾ ಶಾಟ್ ಬದಲಾಯಿಸಲು ಅವಕಾಶ ಹೊಂದಿದ್ದರೆ, ಬೌಲರ್‌ಗಳಿಗೂ ಕೆಲವು ಸ್ವಾತಂತ್ರ್ಯ ಇರಬೇಕು ಎಂಬುದು ಅಶ್ವಿನ್ ಮಾತು. ಇದರಿಂದ ತಾರಿಖ್ ಶೈಲಿಯ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ.



