September 25, 2026
Friday, September 25, 2026
spot_img

VIRAL | ಸೂಪರ್‌ಮಾರ್ಟ್‌ನಿಂದ ತುಪ್ಪ ಕದಿಯುವ ವೇಳೆ ಸಿಕ್ಕಿಬಿದ್ದ ಫಾರೀನ್‌ ರಿಟರ್ನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಸ್ಟ್ರೇಲಿಯಾದ ಬಂದ ವ್ಯಕ್ತಿಯೊಬ್ಬರು ಸೂಪರ್‌ ಮಾರ್ಟ್‌ನಲ್ಲಿ ತುಪ್ಪ ಕದ್ದು ಸಿಕ್ಕಿಬಿದ್ದಿದ್ದಾರೆ.

ಹರಿಯಾಣದ ಮೋತಿ ನಗರ ನಿವಾಸಿ ಆಶು ಭಾಟಿಯಾ ಎಂದು ಗುರುತಿಸಲಾಗಿದೆ. ಸಣ್ಣ ಮಾರ್ಟ್‌ ಒಂದರಲ್ಲಿ ಜೇನುತುಪ್ಪ ಹಾಗೂ ತುಪ್ಪವನ್ನು ಕದಿಯುವ ವೇಳೆ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಪ್ರವಾಸಿ ವೀಸಾದ ಮೂಲಕ ಸುತ್ತಾಡಿ ಬಂದಿದ್ದ ಈತ ಹರಿಯಾಣದ ಸದರ್ ಬಜಾರ್ ಸಮೀಪವಿರುವ ರಿಟೇಲ್ ಸ್ಟೋರ್‌ಗೆ ನುಗ್ಗಿದ್ದಾನೆ. ಆರೋಪಿಯು ಪತ್ತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ಬಟ್ಟೆಯೊಳಗೆ ಹಸುವಿನ ತುಪ್ಪ, ಜೇನುತುಪ್ಪ, ಕೆಚಪ್ ಮತ್ತು ಇತರ ವಸ್ತುಗಳನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.

ಅಂಗಡಿಯೊಳಗೆ ತೆರಳಿ ಆತ ಯಾರಿಗೂ ತಿಳಿಯದಂತೆ ತನ್ನ ಪ್ಯಾಂಟ್ ಮತ್ತು ಬಟ್ಟೆಯೊಳಗೆ ಕದ್ದ ವಸ್ತುಗಳನ್ನು ಬಚ್ಚಿಟ್ಟುಕೊಂಡಿದ್ದಾನೆ. ಆದರೆ ಬಿಲ್ ಕೌಂಟರ್ ಗೆ ಹೋಗುವಾಗ ಕೇವಲ ಮ್ಯಾಗಿ ನೂಡಲ್ಸ್‌ನ ಒಂದೆ ಪ್ಯಾಕೆಟ್ ನ ಜೊತೆಗೆ ತೆರಳಿದ್ದಾನೆ.‌

ಅವರ ನಡವಳಿಕೆಯಿಂದಲೇ ಅಂಗಡಿ ಸಿಬ್ಬಂದಿ ಕಳ್ಳನೆಂದು ಗುರುತಿಸಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡೂವರೆ ಸಾವಿರ ರೂಪಾಯಿ ಮೌಲ್ಯದ ತುಪ್ಪ ಹಾಗೂ ಐನೂರು ರೂಪಾಯಿ ಮೌಲ್ಯದ ಜೇನುತುಪ್ಪ ಕದ್ದಿದ್ದಾರೆ.

Must Read