February 11, 2026
Wednesday, February 11, 2026
spot_img

Yoga | ನಿದ್ರೆ ಬರ್ತಿಲ್ಲವಾ? ಮೊಬೈಲ್ ಬಿಟ್ಟು ಈ 3 ಯೋಗಾಸನ ಟ್ರೈ ಮಾಡಿ!

ಇತ್ತೀಚಿನ ದಿನಗಳಲ್ಲಿ ಹಲವರಿಗೆ ಒಂದೇ ಸಮಸ್ಯೆ… ಬೆಡ್ ಮೇಲೆ ಮಲಗಿದ್ರೇ ಸಾಕು, ಯೋಚನೆಗಳು ಮಳೆ ಹನಿ ತರ ಸುರಿಯುತ್ತವೆ. ಮೊಬೈಲ್ ಸ್ಕ್ರೀನ್, ಟಿವಿ, ದಿನಪೂರ್ತಿ ಒತ್ತಡ ಇವೆಲ್ಲ ಸೇರಿ ನಿದ್ರೆ ದೂರವಾಗಿಸುತ್ತಿವೆ. ಮಾತ್ರೆ ತೆಗೆದುಕೊಂಡು ನಿದ್ರೆ ತರಿಸಿಕೊಳ್ಳೋದಕ್ಕಿಂತ, ನ್ಯಾಚುರಲ್ ಆಗಿ ಮನಸ್ಸು ಶಾಂತವಾಗಿದ್ರೆ ನಿದ್ರೆ ಸ್ವತಃ ಬರುತ್ತೆ. ಅದಕ್ಕೆ ಮಲಗುವ ಮುನ್ನ 10 ನಿಮಿಷ ಯೋಗ ಮಾಡೋದು ಸೂಪರ್ ಸೊಲ್ಯೂಷನ್.

ನರಮಂಡಲಕ್ಕೆ ರಿಲ್ಯಾಕ್ಸ್ ಬೇಕು!
ದೇಹ ಮತ್ತು ಮೆದುಳು ಸದಾ ಅಲರ್ಟ್ ಮೋಡ್‌ನಲ್ಲಿ ಇದ್ರೆ ನಿದ್ರೆ ಬರೋದಿಲ್ಲ. ಸಿಂಪಲ್ ಯೋಗಾಸನಗಳು ಬೆನ್ನು, ಸೊಂಟ ಮತ್ತು ಸ್ನಾಯುಗಳ ಒತ್ತಡ ಕಡಿಮೆ ಮಾಡಿ, ಉಸಿರಾಟ ನಿಧಾನಗೊಳಿಸಿ ಮನಸ್ಸಿಗೆ ಶಾಂತಿ ಕೊಡುತ್ತವೆ. ಆಗ ಕಣ್ಣು ಸ್ವಾಭಾವಿಕವಾಗಿ ಭಾರವಾಗುತ್ತೆ.

ಗೋಡೆಗೆ ಕಾಲು ಕೊಟ್ಟು ಮಲಗಿ (Legs Up the Wall)
ಗೋಡೆಯ ಹತ್ತಿರ ಮಲಗಿ, ಕಾಲುಗಳನ್ನು ಮೇಲಕ್ಕೆ ಎತ್ತಿ ಗೋಡೆಗೆ ಆನಿಸಿ. ಕೈಗಳನ್ನು ಪಕ್ಕದಲ್ಲಿ ಬಿಡಿ, ಕಣ್ಣು ಮುಚ್ಚಿ ದೀರ್ಘವಾಗಿ ಉಸಿರಾಡಿ. ದಿನಪೂರ್ತಿ ಇದ್ದ ಸುಸ್ತು, ಕಾಲು ನೋವು ಕಡಿಮೆಯಾಗುತ್ತೆ. ಮನಸ್ಸು ಹಗುರವಾಗಿ ನಿದ್ರೆ ಬರೋಕೆ ಸಿದ್ಧವಾಗುತ್ತೆ.

ಇದನ್ನೂ ಓದಿ:

ಕುಳಿತು ಮುಂದಕ್ಕೆ ಬಾಗುವ ಭಂಗಿ (Seated Forward Bend)
ನೆಲದ ಮೇಲೆ ಕಾಲು ಚಾಚಿ ಕೂತು, ನಿಧಾನವಾಗಿ ಮುಂದಕ್ಕೆ ಬಾಗಿರಿ. ಕಾಲುಗಳನ್ನು ಮುಟ್ಟೋಕೆ ಟ್ರೈ ಮಾಡಿ. ಬೆನ್ನುಮೂಳೆಯಲ್ಲಿನ ಸೆಳೆತ ಕಡಿಮೆಯಾಗುತ್ತೆ, ಅನಗತ್ಯ ಯೋಚನೆಗಳು ನಿಧಾನವಾಗಿ ಶಾಂತವಾಗುತ್ತವೆ.

ಶವಾಸನ ಸಂಪೂರ್ಣ ರಿಲ್ಯಾಕ್ಸ್ ಮೋಡ್
ಕೊನೆಯದಾಗಿ ಬೆಡ್ ಅಥವಾ ನೆಲದ ಮೇಲೆ ಮಲಗಿ, ಕೈ-ಕಾಲುಗಳನ್ನು ಲೂಸ್ ಆಗಿ ಬಿಡಿ. ಕಣ್ಣು ಮುಚ್ಚಿ, ದೇಹ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದೆ ಅಂತ ಫೀಲ್ ಮಾಡಿ. ಈ ಆಸನ ಮೆದುಳಿಗೆ “ಇಗಾ ಮಲಗೋ ಸಮಯ” ಅನ್ನೋ ಸಿಗ್ನಲ್ ಕೊಡುತ್ತೆ.

ರಾತ್ರಿ ಫೋನ್ ಸ್ಕ್ರೋಲ್ ಮಾಡೋ ಸಮಯದಲ್ಲಿ ಕೇವಲ 10 ನಿಮಿಷ ಈ ಯೋಗಾಸನಗಳನ್ನು ಟ್ರೈ ಮಾಡಿದ್ರೆ, ದೇಹ-ಮನಸ್ಸು ರಿಲ್ಯಾಕ್ಸ್ ಆಗಿ ನಿದ್ರೆ ಸಹಜವಾಗಿ ಬರುತ್ತೆ. ಒಳ್ಳೆ ನಿದ್ರೆ ಬಂದರೆ, ಮರುದಿನ ನಿಮ್ಮ ದಿನವೂ ಫ್ರೆಶ್ ಆಗಿ ಶುರುವಾಗುತ್ತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !