ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಮುಖ ಕಾರ್ಪೊರೇಟ್ ಸ್ಟಾಕ್ ಬ್ರೋಕರ್ ಆಗಿರುವ ‘ಸ್ಟಾಕ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್’, ಹೂಡಿಕೆ ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ತನ್ನ ಅತ್ಯಾಧುನಿಕ ಹೂಡಿಕೆ ಅಪ್ಲಿಕೇಶನ್ ‘ಸ್ಟಾಕ್‌ಫಿನ್ 2.0’ ಅನ್ನು ದೇಶಾದ್ಯಂತ ಬಿಡುಗಡೆ ಮಾಡಿದೆ.
ಏನಿದರ ವಿಶೇಷತೆ?
ಈ ಅಪ್ಲಿಕೇಶನ್ ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗದೆ, ಶ್ರೇಣಿ II ಮತ್ತು ಶ್ರೇಣಿ III ನಗರಗಳ ಜನರಿಗೂ ಆರ್ಥಿಕ ಸ್ವಾತಂತ್ರ್ಯ ನೀಡುವ ಉದ್ದೇಶ ಹೊಂದಿದೆ. ಈಕ್ವಿಟಿಗಳು, ಮ್ಯೂಚುವಲ್ ಫಂಡ್‌ಗಳು, ಎಸ್‌ಐಪಿ (SIP), ಐಪಿಒ (IPO), ಇಟಿಎಫ್ (ETF) ಮತ್ತು ಎಸ್‌ಎಂಇ (SME) ಸ್ಟಾಕ್‌ಗಳಂತಹ ವಿವಿಧ ಹೂಡಿಕೆ ಆಯ್ಕೆಗಳನ್ನು ಇದು ಒಂದೇ ವೇದಿಕೆಯಲ್ಲಿ ನೀಡುತ್ತದೆ.
ಪ್ರಮುಖ ವೈಶಿಷ್ಟ್ಯಗಳು:
ಪೋರ್ಟ್‌ಫೋಲಿಯೋ ಮೌಲ್ಯ, ಲಾಭ-ನಷ್ಟ ಮತ್ತು ಮಾರುಕಟ್ಟೆ ಏರಿಳಿತಗಳ ಬಗ್ಗೆ ತಕ್ಷಣದ ಮಾಹಿತಿ.
ತಾಂತ್ರಿಕ ಸೂಚಕಗಳು, ಸ್ಕ್ರೀನರ್‌ಗಳು ಮತ್ತು ತಜ್ಞರ ಸಂಶೋಧನಾ ವರದಿಗಳ ಸಹಾಯದಿಂದ ಹೂಡಿಕೆದಾರರು ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು.
ಬಯೋಮೆಟ್ರಿಕ್ ಲಾಗಿನ್, MPIN ಮತ್ತು OTP ಪರಿಶೀಲನೆಯ ಮೂಲಕ ಹೂಡಿಕೆದಾರರ ಹಣ ಮತ್ತು ಮಾಹಿತಿಗೆ ಹೆಚ್ಚಿನ ರಕ್ಷಣೆ ನೀಡಲಾಗಿದೆ.
ಬಳಕೆದಾರರು ತಮ್ಮ ಇಚ್ಛೆಯಂತೆ ಫಾಂಟ್ ಗಾತ್ರ, ಥೀಮ್‌ಗಳು ಮತ್ತು ಹೋಮ್ ಪೇಜ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಳ್ಳಬಹುದು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಮನೋಜ್ ಮುತ್ತತ್ತಿಲ್ ಅಯ್ಯಪ್ಪನ್ ಅವರು ಮಾತನಾಡಿ, “ಡಿಜಿಟಲ್ ಇಂಡಿಯಾ ಮತ್ತು ವಿಕ್ಷಿತ್ ಭಾರತ್ ನಿರ್ಮಾಣದಲ್ಲಿ ಇಂತಹ ಮೊಬೈಲ್ ಅಪ್ಲಿಕೇಶನ್‌ಗಳ ಪಾತ್ರ ದೊಡ್ಡದಿದೆ. ಇ-ಕೆವೈಸಿ ಮತ್ತು ಕಾಗದರಹಿತ ಪ್ರಕ್ರಿಯೆಗಳು ಸಾಮಾನ್ಯ ಜನರನ್ನು ಹೂಡಿಕೆ ಮಾರುಕಟ್ಟೆಗೆ ಹತ್ತಿರ ತಂದಿವೆ” ಎಂದರು.
ಸ್ಟಾಕ್‌ಹೋಲ್ಡಿಂಗ್ ಸರ್ವೀಸಸ್‌ನ ಎಂಡಿ ಮತ್ತು ಸಿಇಒ ಪ್ರಭಾತ್ ಕುಮಾರ್ ದುಬೆ ಅವರು, “ಸ್ಟಾಕ್‌ಫಿನ್ 2.0 ಕೇವಲ ಒಂದು ಅಪ್‌ಡೇಟ್ ಅಲ್ಲ, ಇದು ದೇಶಾದ್ಯಂತ ಸಂಪತ್ತು ಸೃಷ್ಟಿಯನ್ನು ಪ್ರಜಾಪ್ರಭುತ್ವಗೊಳಿಸುವ ಒಂದು ಹೆಜ್ಜೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಆತ್ಮವಿಶ್ವಾಸದಿಂದ ಹೂಡಿಕೆ ಮಾಡಲು ಶಕ್ತಿ ನೀಡುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಶಕಗಳ ನಂಬಿಕೆಯ ಪರಂಪರೆಯನ್ನು ಹೊಂದಿರುವ ಸ್ಟಾಕ್‌ಹೋಲ್ಡಿಂಗ್ ಸಂಸ್ಥೆಯ ಈ ಹೊಸ ಪ್ರಯತ್ನವು, ಚಿಲ್ಲರೆ ಹೂಡಿಕೆದಾರರಿಗೆ ಹೂಡಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಲಾಭದಾಯಕ ಮತ್ತು ಸುಲಭವಾಗಿಸಲಿದೆ.



