February 12, 2026
Thursday, February 12, 2026
spot_img

ಐದು ಲಕ್ಷ ರೂಪಾಯಿ ಮೌಲ್ಯದ ಕಡಲೆಬೆಳೆ ಸುಟ್ಟು ಭಸ್ಮ, ಸಂಕಷ್ಟದಲ್ಲಿ ರೈತ

ಹೊಸದಿಗಂತ ವರದಿ ಸವದತ್ತಿ:

ಬಣವಿಗೆ ಆಕಸ್ಮಿಕ ಬೆಂಕಿ ತಗುಲಿ ಐದು ಲಕ್ಷ ರೂ. ಬೆಲೆಬಾಳುವ ಕಡಲೆ ಸುಟ್ಟು ಬೂದಿಯಾದ ಘಟನೆ ತಾಲೂಕಿನ ಸಂಗ್ರೇಶಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸವರಾಜ ಅಡಿವೆಪ್ಪ ಹಡಪದ ಎಂಬವರಿಗೆ ಸೇರಿದ ಹನ್ನೆರಡು ಎಕರೆ ಪ್ರದೆಶದಲ್ಲಿ ಬೆಳೆದಿದ್ದ ಕಡಲೆ ಬೆಳೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಿತ್ತು ಬಣವೆ ಹಾಕಿದ್ದರು.

ರಾತ್ರಿ ವೇಳೆ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !